back to top
25.6 C
Bengaluru
Friday, October 31, 2025
HomeNewsDRDO Stratospheric Airship ಪ್ರಯೋಗ ಯಶಸ್ವಿ: ಭಾರತ ಸಾಧಿಸಿರುವ ಹೊಸ ಮೈಲಿಗಲ್ಲು

DRDO Stratospheric Airship ಪ್ರಯೋಗ ಯಶಸ್ವಿ: ಭಾರತ ಸಾಧಿಸಿರುವ ಹೊಸ ಮೈಲಿಗಲ್ಲು

- Advertisement -
- Advertisement -

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮಧ್ಯಪ್ರದೇಶದ ಶಿಯೋಪುರ ಪರೀಕ್ಷಾ ತಾಣದಲ್ಲಿ ‘ಸ್ಟ್ರಾಟೋಸ್ಫಿಯರಿಕ್ ಏರ್ಷಿಪ್ ಪ್ಲಾಟ್ಫಾರ್ಮ್’ನ (DRDO Stratospheric Airship Platform) ಮೊದಲ ಯಶಸ್ವಿ ಪ್ರಯೋಗವನ್ನು ನಡೆಸಿತು. ಈ ವಾಯುನೌಕೆಯನ್ನು DRDO ನ ಅಗ್ರಾ ಮೂಲದ ಎಡಿಆರ್ಡಿಇ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಭಯೋತ್ಪಾದಕ ದಾಳಿಯ ಬಳಿಕ, ಭಾರತ-ಪಾಕಿಸ್ತಾನ ನಡುವಿನ ಗಡಿಯಲ್ಲಿ ಉದ್ವಿಗ್ನತೆ ನಡೆಯುತ್ತಿರುವಾಗ, ಡಿಆರ್ಡಿಓ ಈ ಯಶಸ್ಸನ್ನು ಸಾಧಿಸಿದೆ. 17 ಕಿಲೋಮೀಟರ್ ಎತ್ತರದಲ್ಲಿ ಇನ್ಸ್ಟ್ರುಮೆಂಟಲ್ ಪೇಲೋಡ್‌ನೊಂದಿಗೆ ವಾಯುನೌಕೆ ಹಾರಿತು ಮತ್ತು ಸುಮಾರು 62 ನಿಮಿಷಗಳ ಕಾಲ ಪ್ರಯೋಗ ನಡೆಸಿ, ಯಶಸ್ವಿಯಾಗಿ ಭೂಮಿಗೆ ಇಳಿಸಲಾಯಿತು.

ಪರೀಕ್ಷೆಯಲ್ಲಿ ವಾಯುನೌಕೆಯೊಳಗಿನ ಒತ್ತಡ ನಿಯಂತ್ರಣ ವ್ಯವಸ್ಥೆ ಮತ್ತು ಗಾಳಿಯನ್ನು ಹೊರಹಾಕುವ ತುರ್ತು ವ್ಯವಸ್ಥೆಗಳನ್ನು ಪರೀಕ್ಷಿಸಲಾಯಿತು. ಈ ಸಾಧನೆಗಾಗಿ DRDO ತಂಡವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ DRDO ಅಧ್ಯಕ್ಷ ಡಾ. ಸಮೀರ್ ವಿ. ಕಾಮತ್ ಅಭಿನಂದಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ DRDO ಅಧಿಕಾರಿಗಳನ್ನು ಅಭಿನಂದಿಸಿ, ಈ ಪ್ರಯೋಗವು ಭಾರತೀಯ ಸೇನೆಗೆ ಇನ್ನಷ್ಟು ಬಲವನ್ನು ನೀಡುವುದರ ಜೊತೆಗೆ, ಭಾರತವನ್ನು ಇಂತಹ ಸ್ಥಳೀಯ ತಂತ್ರಜ್ಞಾನ ಹೊಂದಿರುವ ಕೆಲವೇ ದೇಶಗಳಲ್ಲಿ ಒಂದಾಗಿ ತೋರಿಸುತ್ತದೆ ಎಂದು ಹೇಳಿದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page