ಭಾರತದಲ್ಲಿ ಮೂಲಸೌಕರ್ಯ ಸುಧಾರಣೆಗಾಗಿ ಭಾರಿ ಹೂಡಿಕೆಗಳು ನಡೆಯುತ್ತಿವೆ. ವಿಶೇಷವಾಗಿ ರೈಲು ಮತ್ತು ರಸ್ತೆ ಯೋಜನೆಗಳಲ್ಲಿ ಹೆಚ್ಚು ಗಮನ ಹರಿಸಲಾಗಿದೆ. ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ಈಗಾಗಲೇ ನಡೆಯುತ್ತಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ದೇಶದ ಮೊದಲ ಬುಲೆಟ್ ರೈಲು ಹಳಿಗಳ ಮೇಲೆ ಓಡುವ ನಿರೀಕ್ಷೆಯಿದೆ.
ಮಾಧ್ಯಮ ವರದಿಗಳ ಪ್ರಕಾರ, ಭಾರತ ಮತ್ತು ಜಪಾನ್ ಸೇರಿ ಹೊಸ ತಲೆಮಾರದ ಇ-10 ಶಿಂಕನ್ಸೆನ್ ಬುಲೆಟ್ ರೈಲು (E-10 Shinkansen Bullet Train) ನಿರ್ಮಾಣ ಮಾಡಲು ಸಿದ್ಧತೆ ನಡೆಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಜಪಾನ್ ಭೇಟಿಯ ಸಮಯದಲ್ಲಿ ಈ ಒಪ್ಪಂದ ಘೋಷಣೆ ಆಗುವ ಸಾಧ್ಯತೆ ಇದೆ.
ಇ-10 ಶಿಂಕನ್ಸೆನ್ ವಿಶೇಷತೆಗಳು
- ಜಪಾನ್‌ನ ಆಲ್ಫಾ-ಎಕ್ಸ್ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ.
- ಭಾರತೀಯ ಪರಿಸ್ಥಿತಿಗಳಿಗೆ ಹೊಂದುವಂತೆ ವಿನ್ಯಾಸ ಮಾಡಲಾಗುತ್ತದೆ.
- ಗರಿಷ್ಠ ವೇಗ ಗಂಟೆಗೆ 400 ಕಿಮೀ.
- ಮೊದಲು ನಿರ್ಧರಿಸಿದ್ದ ಇ-5 ರೈಲು (320 ಕಿಮೀ/ಗಂ)ಗಿಂತ ಹೆಚ್ಚು ವೇಗ.
ಅಹಮದಾಬಾದ್-ಮುಂಬೈ ಹೈ-ಸ್ಪೀಡ್ ಯೋಜನೆ
- ಒಟ್ಟು ಉದ್ದ: 508 ಕಿಮೀ.
- ಮೊದಲ ಹಂತ (50 ಕಿಮೀ) 2027ರಲ್ಲಿ ಪ್ರಾರಂಭ.
- ಸಂಪೂರ್ಣ ಯೋಜನೆ 2029ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ.
ಜಪಾನ್-ಭಾರತ ಸಹಕಾರದ ಐತಿಹಾಸಿಕ ಹೆಜ್ಜೆ. ಈ ಯೋಜನೆ, ನಾಲ್ಕು ದಶಕಗಳ ಹಿಂದೆ ಪ್ರಾರಂಭವಾದ ಮಾರುತಿ-ಸುಜುಕಿ ಸಹಕಾರದಂತೆ ಮಹತ್ವದ್ದು ಎಂದು ತಜ್ಞರು ಹೇಳುತ್ತಾರೆ. ಆದರೆ ಇದರ ಪ್ರಮಾಣ ಮತ್ತು ಪ್ರಾಮುಖ್ಯತೆ ಇನ್ನಷ್ಟು ದೊಡ್ಡದು.
ಭವಿಷ್ಯದ ಪ್ರಯೋಜನಗಳು
- ಭಾರತದ ಬೆಳೆಯುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸುತ್ತದೆ.
- ಭಾರತದಲ್ಲೇ ತಯಾರಾದ ಬುಲೆಟ್ ರೈಲುಗಳನ್ನು ಇತರ ದೇಶಗಳಿಗೆ ರಫ್ತು ಮಾಡಬಹುದು.
- ಜಪಾನಿನ ತಂತ್ರಜ್ಞಾನ ಮತ್ತು ಭಾರತದ ಉತ್ಪಾದನಾ ಸಾಮರ್ಥ್ಯ ಒಟ್ಟಿಗೆ ಬಂದರೆ, ಇದು ವಿಶ್ವದರ್ಜೆಯ ಯೋಜನೆಯಾಗುತ್ತದೆ.
1964ರಿಂದ ಕಾರ್ಯನಿರ್ವಹಿಸುತ್ತಿರುವ ಶಿಂಕನ್ಸೆನ್ ರೈಲುಗಳಿಗೆ ಇತಿಹಾಸದಲ್ಲೇ ಉತ್ತಮ ಸುರಕ್ಷತಾ ದಾಖಲೆಯಿದೆ. ಇದುವರೆಗೆ ಯಾವುದೇ ಪ್ರಯಾಣಿಕನು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿಲ್ಲ. ಭಾರತದಲ್ಲೂ ಇದೇ ಮಟ್ಟದ ಸುರಕ್ಷತೆಯನ್ನು ಜಪಾನ್ ಭರವಸೆ ನೀಡಿದೆ.