back to top
25.8 C
Bengaluru
Monday, July 21, 2025
HomeNewsIran ಗೆ Earthquake ಭೀತಿ: ಭೂನಾಶಕ್ಕೂ ಮುನ್ನ ನೈಸರ್ಗಿಕ ಆಪತ್ತು!

Iran ಗೆ Earthquake ಭೀತಿ: ಭೂನಾಶಕ್ಕೂ ಮುನ್ನ ನೈಸರ್ಗಿಕ ಆಪತ್ತು!

- Advertisement -
- Advertisement -

Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಇರಾನ್ (Iran) ವಿರುದ್ಧ ಗಂಭೀರ ಎಚ್ಚರಿಕೆ ನೀಡಿದ್ದು, ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ಇಸ್ಲಾಮಿಕ್ ಗಣರಾಜ್ಯದ ಮೇಲೆ ತೀವ್ರ ಬಾಂಬ್ ದಾಳಿ ನಡೆಸುವುದಾಗಿ ತಿಳಿಸಿದ್ದಾರೆ. ಜೊತೆಗೆ, ದ್ವಿತೀಯ ಸುಂಕಗಳನ್ನು ವಿಧಿಸುವ ಸಾಧ್ಯತೆಯೂ ಇದೆ. ಅವರು ಖಾಸಗಿ ಸುದ್ದಿಸಂಸ್ಥೆಗೊಂದು ಸಂದರ್ಶನ ನೀಡಿದ್ದು, ಇರಾನಿಗೆ ಅಮೆರಿಕ 2 ವಾರಗಳ ಕಾಲಾವಕಾಶ ನೀಡಿದೆಯೆಂದರು.

ಇರಾನ್ ಪರಮಾಣು ಒಪ್ಪಂದದ ಚರ್ಚೆಯ ನಡುವೆ, ರಾಜಧಾನಿ ಟೆಹ್ರಾನ್ ಭೂಕಂಪ ಭೀತಿಯಲ್ಲಿದೆ. ಈಗಾಗಲೇ ಟೆಹ್ರಾನ್ ನಗರದ ಸುತ್ತಮುತ್ತ ಸಣ್ಣ ಭೂಕಂಪಗಳು ಸಂಭವಿಸಿದ್ದು, ತಜ್ಞರು ಈ ಪ್ರದೇಶ ಭೂಕಂಪಕ್ಕೆ ಅತಿಯಾಗಿ ಅಸುರಕ್ಷಿತ ಎಂದು ಎಚ್ಚರಿಸಿದ್ದಾರೆ.

ಟೆಹ್ರಾನ್‌ನಲ್ಲಿ ನೀರಿನ ಕೊರತೆ, ವಿದ್ಯುತ್ ಕಡಿತ ಮತ್ತು ಮಾಲಿನ್ಯದ ಸಮಸ್ಯೆಗಳು ಈಗಾಗಲೇ ನಗರ ಜನರ ಬದುಕನ್ನು ಕಷ್ಟಗೊಳಿಸಿವೆ. ತುರ್ತು ಕ್ರಮ ಕೈಗೊಳ್ಳದಿದ್ದರೆ, ಭೀಕರ ಭೂಕಂಪ ಸಂಭವಿಸುವ ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಟೆಹ್ರಾನ್‌ನ ಆಗ್ನೇಯ ಭಾಗದಲ್ಲಿ 3.0 ಮತ್ತು 3.3 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದವು. ಇವು ಯಾವುದೇ ಜೀವಹಾನಿಯನ್ನು ಉಂಟು ಮಾಡದಿದ್ದರೂ, ಮುಂದಿನ ಭವಿಷ್ಯಕ್ಕೆ ಎಚ್ಚರಿಕೆಯ ಸೂಚನೆ ನೀಡಿವೆ.

ಟೆಹ್ರಾನ್ 3 ಪ್ರಮುಖ ದೋಷ ರೇಖೆಗಳ ಮೇಲೆ ನೆಲೆಗೊಂಡಿದೆ, ಇದರಿಂದಾಗಿ ನಗರ ಭೂಕಂಪಕ್ಕೆ ಹೆಚ್ಚು ಹಾನಿಗೊಳಗಾಗುವ ಸಾಧ್ಯತೆಯಿದೆ. ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA) ನಡೆಸಿದ ಅಧ್ಯಯನವು, 7.0 ತೀವ್ರತೆಯ ಭೂಕಂಪ ಸಂಭವಿಸಿದರೆ, ನಗರದ ಅರ್ಧ ಕಟ್ಟಡಗಳು ಕುಸಿಯಬಹುದು ಎಂದು ಹೇಳಿದೆ.

ಇತಿಹಾಸದ ಭೀಕರ ಭೂಕಂಪಗಳು

1990: ಕ್ಯಾಸ್ಪಿಯನ್ ಪರ್ವತ ಪ್ರದೇಶದಲ್ಲಿ 7.4 ತೀವ್ರತೆಯ ಭೂಕಂಪ, 35,000-50,000 ಜನರು ಮೃತಪಟ್ಟರು.

1830: 7.1 ತೀವ್ರತೆಯ ಭೂಕಂಪ, ಶೆಮಿರಾನ್ ಹಳ್ಳಿಯ ಸಂಪೂರ್ಣ ನಾಶ.

2003: ಬಾಮ್ ನಗರದಲ್ಲಿ 6.6 ತೀವ್ರತೆಯ ಭೂಕಂಪ, ಕನಿಷ್ಠ 34,000 ಮಂದಿ ಮೃತರಾದರು.

2018ರ ಅಧ್ಯಯನದ ಪ್ರಕಾರ, ಮುಂದಿನ 2 ರಿಂದ 12 ವರ್ಷಗಳಲ್ಲಿ, ಟೆಹ್ರಾನ್‌ನ 100 ಕಿಮೀ ವ್ಯಾಪ್ತಿಯೊಳಗೆ 40% ರಿಂದ 70% ಭೂಕಂಪ ಸಂಭವಿಸುವ ಸಾಧ್ಯತೆ ಇದೆ. ಇದು ನಗರಕ್ಕೆ ದೊಡ್ಡ ಅಪಾಯವಾಗಬಹುದು.

ಇದು ಇರಾನ್ ಸರ್ಕಾರಕ್ಕೆ ಗಂಭೀರ ಎಚ್ಚರಿಕೆಯಾಗಿದೆ. ಈಗಾಗಲೇ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ದೇಶಕ್ಕೆ, ನೈಸರ್ಗಿಕ ಆಪತ್ತು ಮತ್ತಷ್ಟು ಸಂಕಷ್ಟ ಉಂಟುಮಾಡುವ ಸಾಧ್ಯತೆಯಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page