back to top
23.4 C
Bengaluru
Wednesday, October 8, 2025
HomeBusinessಭಾರತದಲ್ಲಿ Electric Car ತಯಾರಿಕೆ ಶೀಘ್ರ ಏರಿಕೆಗೆ ಸಾಧ್ಯತೆ – ಮುಂದಿನ ಐದು ವರ್ಷದಲ್ಲಿ 10...

ಭಾರತದಲ್ಲಿ Electric Car ತಯಾರಿಕೆ ಶೀಘ್ರ ಏರಿಕೆಗೆ ಸಾಧ್ಯತೆ – ಮುಂದಿನ ಐದು ವರ್ಷದಲ್ಲಿ 10 ಪಟ್ಟು ಹೆಚ್ಚಳ

- Advertisement -
- Advertisement -

New Delhi: ಇವಿ (EV-Electric car) ಕ್ಷೇತ್ರದಲ್ಲಿ ನಿಧಾನವಾಗಿ ಮುಂದುವರಿದಿರುವ ಭಾರತ, ಮುಂದಿನ ಐದು ವರ್ಷಗಳಲ್ಲಿ ಭಾರಿ ಬೆಳವಣಿಗೆ ಕಾಣಲಿದೆ ಎಂದು ರೋಡಿಯಂ ಗ್ರೂಪ್ (Rhodium Group) ಪ್ರಕಟಿಸಿದ ವರದಿ ಹೇಳುತ್ತದೆ.

ವರದಿ ಪ್ರಕಾರ, ಭಾರತವು 2030ರ ಹೊತ್ತಿಗೆ ವರ್ಷಕ್ಕೆ 25 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಲಿದೆ. ಇದು ಪ್ರಸ್ತುತ ತಯಾರಣೆಗಿಂತ 10 ಪಟ್ಟು ಹೆಚ್ಚಾಗಿರಲಿದೆ. ಈಗಾಗಲೇ ಭಾರತದಲ್ಲಿ ವರ್ಷಕ್ಕೆ ಸುಮಾರು 2 ಲಕ್ಷ ಎಲೆಕ್ಟ್ರಿಕ್ ಕಾರುಗಳು ತಯಾರಾಗುತ್ತಿವೆ.

ಪ್ರಸ್ತುತ ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಇವಿ ಕಾರುಗಳಿಗೆ ಬೇಡಿಕೆ ಇದೆ. ಆದರೆ 2030ರ ವೇಳೆಗೆ ಇದು 4 ರಿಂದ 14 ಲಕ್ಷದವರೆಗೆ ಏರಬಹುದು. ಈ ಕಾರಣದಿಂದ, ಹೆಚ್ಚಿನ ಪ್ರಮಾಣದಲ್ಲಿ ಕಾರುಗಳನ್ನು ತಯಾರಿಸಿ ವಿದೇಶಕ್ಕೆ ರಫ್ತು ಮಾಡುವ ಅವಕಾಶವೂ ದೊರೆಯಬಹುದು.

ಚೀನಾದಂತೆಯೇ ಕಡಿಮೆ ವೆಚ್ಚದಲ್ಲಿ ಇವಿ ತಯಾರಿಕೆ ಮಾಡುವ ಉದ್ದೇಶದಿಂದ ಭಾರತವು ತಂತ್ರಜ್ಞಾನ ಅಭಿವೃದ್ಧಿ ಪಡಿಸಬೇಕಿದೆ. ಇಲ್ಲದಿದ್ದರೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆ ಕುಗ್ಗಬಹುದು.

2030ರಲ್ಲಿ ಪ್ರಮುಖ ರಾಷ್ಟ್ರಗಳ ಎಲೆಕ್ಟ್ರಿಕ್ ಕಾರು ತಯಾರಿಕಾ ಸಾಮರ್ಥ್ಯ

  • ಚೀನಾ: 2.9 ಕೋಟಿ ಕಾರುಗಳು
  • ಯೂರೋಪ್ ಯೂನಿಯನ್: 90 ಲಕ್ಷ
  • ಅಮೆರಿಕ: 60 ಲಕ್ಷ
  • ಭಾರತ: 25 ಲಕ್ಷ
  • ದಕ್ಷಿಣ ಕೊರಿಯಾ: 19 ಲಕ್ಷ
  • ಜಪಾನ್: 14 ಲಕ್ಷ

ಪ್ರಸ್ತುತ ಟಾಟಾ, ಮಹೀಂದ್ರಾ ಮತ್ತು ಎಂಜಿಎಂ ಕಂಪನಿಗಳು ಭಾರತದ ಇವಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇವೆ. ಜಪಾನ್‌ನಿಗೂ ವರ್ಷಕ್ಕೆ 11 ಲಕ್ಷ ಕಾರು ತಯಾರಿಸುವ ಸಾಮರ್ಥ್ಯವಿದೆ, ಆದರೆ ಇತ್ತೀಚೆಗೆ ಅದರಲ್ಲಿ ಹೆಚ್ಚಿನ ಬೆಳವಣಿಗೆ ಕಂಡುಬಂದಿಲ್ಲ ಎಂದು ಹೇಳಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page