ಎಲೋನ್ ಮಸ್ಕ್ ಅವರ ಪುತ್ರಿ (Elon Musk’s daughter) ವಿವಿಯನ್ ಜೆನ್ನಾ ವಿಲ್ಸನ್ (Vivian Jenna Wilson) ಅವರು ಅಮೆರಿಕವನ್ನು (America) ತೊರೆಯುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ, ದೇಶದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಟೆಸ್ಲಾ ಸಿಇಒ ಮತ್ತು ಟೆಕ್ ಮೊಗಲ್ ಎಲೋನ್ ಮಸ್ಕ್ ಅವರ ಪುತ್ರಿ ವಿವಿಯನ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ, “ನಾನು ಇಲ್ಲಿ ಯಾವುದೇ ಭವಿಷ್ಯವನ್ನು ಕಾಣುತ್ತಿಲ್ಲ” ಎಂದು ಹೇಳಿದ್ದಾರೆ. ಮಸ್ಕ್ ಇತ್ತೀಚಿನ US ಚುನಾವಣಾ ಫಲಿತಾಂಶಗಳನ್ನು ಸಂಭ್ರಮಿಸಿದರೆ, ಅವರ ಮಗಳು ಗಂಭೀರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ, ಅಮೆರಿಕಾದಲ್ಲಿ ಭವಿಷ್ಯವು ಮಂಕಾಗಿದೆ ಎಂದು ಹೇಳಿದರು.
“ನಾನು ವರ್ಷಗಳಿಂದ ಭಯಪಟ್ಟದ್ದು ನಿನ್ನೆ ನಿಜವಾಯಿತು” ಎಂದು ಅವರು ಬರೆದಿದ್ದಾರೆ. “ನಾನು ಈ ದೇಶದಲ್ಲಿ ಭವಿಷ್ಯವನ್ನು ಕಾಣುತ್ತಿಲ್ಲ. ಟ್ರಂಪ್ ಅವರು ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರೂ ಮತ್ತು transgender ವಿರೋಧಿ ಕಾನೂನುಗಳನ್ನು ತಕ್ಷಣವೇ ಜಾರಿಗೊಳಿಸದಿದ್ದರೂ ಸಹ, ಅವರಿಗೆ ಮತ ಹಾಕಿದ ಜನರು ಶೀಘ್ರದಲ್ಲೇ ಬದಲಾಗುವ ಸಾಧ್ಯತೆಯಿಲ್ಲ.”
ಜಸ್ಟಿನ್ ವಿಲ್ಸನ್ ಎಲೋನ್ ಮಸ್ಕ್ ಅವರ ಮೊದಲ ಹೆಂಡತಿಗೆ ಜನಿಸಿದ ಮಕ್ಕಳಲ್ಲಿ ಒಬ್ಬರು. 2022ರಲ್ಲಿ trans ಎಂದು ಗುರುತಿಸಿಕೊಂಡರು ಮತ್ತು ತನ್ನ ಹೆಸರನ್ನು ವಿವಿಯನ್ ಜೆನ್ನಾ ವಿಲ್ಸನ್ ಎಂದು ಬದಲಾಯಿಸಿಕೊಂಡರು. ಮಸ್ಕ್ಗೆ ಅದು ಇಷ್ಟವಿರಲಿಲ್ಲ. ಇದರಿಂದಾಗಿ ತಂದೆಯಿಂದ ದೂರ ಉಳಿದಿದ್ದಾರೆ.
“ಜೆನ್ನಾ ಹೆಚ್ಚು ಕಮ್ಯುನಿಸ್ಟ್ ಭಾವನೆಗಳನ್ನು ಹೊಂದಿದ್ದಾಳೆ. ಎಲ್ಲಾ ಶ್ರೀಮಂತರು ಕೆಟ್ಟವರು ಎಂದು ಆಕೆ ಭಾವಿಸುತ್ತಾಳೆ. ಅವಳು ಹಾಗೆ ಆಗಲು ಅವಳು ಓದಿದ ಶಾಲೆಯೇ ಕಾರಣ. ನಾನು ಅವಳೊಂದಿಗೆ ಉತ್ತಮ ಸಂಬಂಧ ಹೊಂದಲು ಹಲವು ಬಾರಿ ಪ್ರಯತ್ನಿಸಿದೆ, ಆದರೆ ವಿಫಲವಾದೆ. ಆದರೆ ಆಕೆ ನನ್ನೊಂದಿಗೆ ಸ್ವಲ್ಪ ಸಮಯವನ್ನೂ ಕಳೆಯಲು ಇಷ್ಟಪಡಲಿಲ್ಲ” ಎಂದು ಮಸ್ಕ್ ತನ್ನ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ.