Bengaluru (Bangalore) : 14 ಸರ್ಕಾರಿ ಕಾಲೇಜುಗಳು ಒಳಗೊಂಡಂತೆ ರಾಜ್ಯದ 30 Engineering College ಗಳನ್ನು Regional Ecosystem For Technical Excellence (RETE) ಅಡಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ (C. N. Ashwath Narayan) ಮಂಗಳವಾರ ತಿಳಿಸಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(Visvesvaraya Technological University) (VTU) ದ ಉಪಕುಲಪತಿ (Vice Chancellor) ಪ್ರೊ.ಕರಿಸಿದ್ದಪ್ಪ (Dr. Karisiddappa) ನೇತೃತ್ವದ ಉನ್ನತಾಧಿಕಾರ ಸಮಿತಿ ನೀಡಿದ ವರದಿಯನ್ನು ಸ್ವೀಕರಿಸಿದ ನಂತರ ಮಾತಾನಾಡಿದ ಸಚಿವರು “ರಾಜ್ಯದಾದ್ಯಂತ ಈ ಆಯ್ದ ಎಂಜಿನಿಯರಿಂಗ್ ಕಾಲೇಜುಗಳನ್ನು ಜಾಗತಿಕ ಗುಣಮಟ್ಟದ ತಾಂತ್ರಿಕ ಕಾಲೇಜುಗಳಾಗಿ ಐದು ವರ್ಷಗಳಲ್ಲಿ ಮೇಲ್ದರ್ಜೆಗೇರಿಸುವ ಉದ್ದೇಶವನ್ನು RETE ಹೊಂದಿದೆ” ಎಂದು ಹೇಳಿದರು