back to top
19.4 C
Bengaluru
Thursday, February 19, 2026
HomeNewsEngland ತಂಡದ ಉಪನಾಯಕನಾಗಿ ಹ್ಯಾರಿ ಬ್ರೂಕ್ ನೇಮಕ

England ತಂಡದ ಉಪನಾಯಕನಾಗಿ ಹ್ಯಾರಿ ಬ್ರೂಕ್ ನೇಮಕ

- Advertisement -
- Advertisement -

ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿ (India-England series) ಜನವರಿ 22 ರಿಂದ ಶುರುವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡವು 25 ವರ್ಷದ ಯುವ ದಾಂಡಿಗ ಹ್ಯಾರಿ ಬ್ರೂಕ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಿದೆ. ಹಾಗಾಗಿ, ಅವರು ಮುಂಬರುವ ಸರಣಿಗಳಲ್ಲಿ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡದ ವೈಸ್ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೊಬ್ಬ ಮುಖ್ಯ ಅಂಶವೆಂದರೆ, ಇಂಗ್ಲೆಂಡ್ ತಂಡದ ಸೀಮಿತ ಓವರ್ ಗಳ ನಾಯಕನಾಗಿ ಜೋಸ್ ಬಟ್ಲರ್ ಅವರನ್ನು ಮುಂದುವರೆಸಲಾಗಿದೆ. ಆದರೆ, ಈ ಸರಣಿಯಲ್ಲಿ ಅವರು ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಬದಲು, ಫಿಲ್ ಸಾಲ್ಟ್ ಅವರಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲಾಗಿದೆ.

ಇಂಗ್ಲೆಂಡ್ ತಂಡದ ರೂಪುರೇಖೆ

ಏಕದಿನ ತಂಡ: ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್ (ಉಪನಾಯಕ), ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜಾಮಿ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

ಟಿ20 ತಂಡ: ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್ (ಉಪನಾಯಕ), ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜಾಮಿ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

ಭಾರತ ಮತ್ತು ಇಂಗ್ಲೆಂಡ್ ಸರಣಿ ವೇಳಾಪಟ್ಟಿ

  • ಜನವರಿ 22, ಬುಧವಾರ: 1ನೇ ಟಿ20, ಈಡನ್ ಗಾರ್ಡನ್ಸ್, ಕೋಲ್ಕತ್ತಾ
  • ಜನವರಿ 25, ಶನಿವಾರ: 2ನೇ ಟಿ20, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
  • ಜನವರಿ 28, ಮಂಗಳವಾರ: 3ನೇ ಟಿ20, ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ರಾಜ್‌ಕೋಟ್
  • ಜನವರಿ 31, ಶುಕ್ರವಾರ: 4ನೇ ಟಿ20, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಪುಣೆ
  • ಫೆಬ್ರವರಿ 02, ಭಾನುವಾರ: 5ನೇ ಟಿ20, ವಾಂಖೆಡೆ ಸ್ಟೇಡಿಯಂ, ಮುಂಬೈ
  • ಫೆಬ್ರವರಿ 06, ಗುರುವಾರ: 1ನೇ ಏಕದಿನ, ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ನಾಗ್ಪುರ
  • ಫೆಬ್ರವರಿ 09, ಭಾನುವಾರ: 2ನೇ ಏಕದಿನ, ಬಾರಾಬತಿ ಸ್ಟೇಡಿಯಂ, ಕಟಕ್
  • ಫೆಬ್ರವರಿ 12, ಬುಧವಾರ: 3ನೇ ಏಕದಿನ, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page