Srinagar: ಲಡಾಖ್ ಪ್ರತ್ಯೇಕ ರಾಜ್ಯ ಸ್ಥಾನಮಾನ ಹಾಗೂ ಸಂವಿಧಾನದ 6ನೇ ಪರಿಚ್ಛೇದ ಸೇರಿಸುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಗಳಲ್ಲಿ ನಾಲ್ವರು ಮೃತಪಟ್ಟ ನಂತರ ಮತ್ತು 90 ಜನರು ಗಾಯಗೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಂಗ್ಚುಕ್ ಅವರು ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA)ನಲ್ಲಿ ಪ್ರಮುಖ ಸದಸ್ಯರಾಗಿದ್ದು, ಹಿಂಸೆಗೆ ಪ್ರಚೋದನೆ ನೀಡಿರುವ ಆರೋಪದೊಂದಿಗೆ ಗೃಹ ಸಚಿವಾಲಯವು ಆರೋಪಿಸಿದೆ. ಆದರೆ ಸೋನಮ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ.
ವಾಂಗ್ಚುಕ್ ಸ್ಥಾಪಿಸಿದ ಲಡಾಖ್ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳವಳಿ (SECMOL) ಯ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಪರವಾನಗಿ ಕೇಂದ್ರ ಗೃಹ ಸಚಿವಾಲಯ ಗುರುವಾರ ರದ್ದುಗೊಳಿಸಿದೆ.
ಲೇಹ್‌ನಲ್ಲಿ ಪೊಲೀಸರು ಕ್ರಮ
- ಹಲವಾರು FIR ದಾಖಲಿಸಲಾಗಿದೆ.
- ಗಲಭೆಗೆ ಕಾರಣರಾದ 50 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
- ಅಶಾಂತಿಯನ್ನು ಪ್ರಚೋದಿಸಿದ ಶಂಕಿತರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಘರ್ಷಣೆಯಲ್ಲಿ, ಬಿಜೆಪಿ ಮತ್ತು ಲಡಾಖ್ ಸ್ವಾಯತ್ತ ಬೆಟ್ಟದ ಅಭಿವೃದ್ಧಿ ಮಂಡಳಿಯ ಕಚೇರಿಗಳು ಸೇರಿದಂತೆ ಹಲವಾರು ಸರ್ಕಾರಿ ಮತ್ತು ರಾಜಕೀಯ ಕಚೇರಿಗಳನ್ನು ಉದ್ರಿಕ್ತರು ಧ್ವಂಸಗೊಳಿಸಿದ್ದಾರೆ.
ನವದೆಹಲಿಯಲ್ಲಿ ಮಾತುಕತೆ
- ಎಲ್ಎಬಿ ನಾಯಕ ಥುಪ್ಸ್ತಾನ್ ಚೆವಾಂಗ್ ಮತ್ತು ಚೆರಿಂಗ್ ಡೋರ್ಜಯ್ ಹೇಳಿಕೆ,
- ಸೆಪ್ಟಂಬರ್ 27 ಅಥವಾ 28ರಂದು ನವದೆಹಲಿಯಲ್ಲಿ ಪೂರ್ವಸಿದ್ಧತಾ ಸುತ್ತಿನ ಮಾತುಕತೆ ನಡೆಯಲಿದೆ.
- LAB ಮತ್ತು KDA ಯಿಂದ ತಲಾ ಮೂವರು ಸದಸ್ಯರು, ಲಡಾಖ್ ಸಂಸತ್ ಸದಸ್ಯರು, MHA ಮತ್ತು ಪ್ರತಿ ಗುಂಪಿನಿಂದ ಏಳು ಸದಸ್ಯರು ಭಾಗವಹಿಸುತ್ತಾರೆ.
ಬೇಡಿಕೆಗಳಲ್ಲಿ ರಾಜ್ಯ ಸ್ಥಾನಮಾನ, ಸಂವಿಧಾನದ ಆರನೇ ಪರಿಚ್ಛೇದದಲ್ಲಿ ಸ್ಥಾನಮಾನ, ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಸದೀಯ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಸೇರಿವೆ.
ಜಿಲ್ಲಾಡಳಿತವು ಎಲ್ಲಾ ಶಾಲೆ, ಕಾಲೇಜುಗಳು, ಅಂಗನವಾಡಿ ಕೇಂದ್ರಗಳು ಮತ್ತು ತರಬೇತಿ ಸಂಸ್ಥೆಗಳನ್ನು ಎರಡು ದಿನಗಳವರೆಗೆ ಮುಚ್ಚುವಂತೆ ಆದೇಶಿಸಿದೆ.
ಮೃತರು ಮತ್ತು ಗಾಯಗೊಂಡವರು
- ಪೊಲೀಸಿನ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರು,
- ತ್ಸೆವಾಂಗ್ ಥಾರ್ಚಿನ್ (46), ನಿವೃತ್ತ ಸೈನಿಕ, ಸ್ಕುರ್ಬುಚಾನ್
- ನಾಮ್ಗಾಯಲ್ (24), ಇಗೂವ್, ಸ್ಟಾನ್ಜಿನ್
- ಜಿಗ್ಮೆಟ್ ಡೋರ್ಜಯ್ (21), ಖಾರ್ನಾಕ್ಲಿಂಗ್
- ರಿಂಚೆನ್ ದಾದುಲ್ (21), ಹನು
ಗಾಯಗೊಂಡವರಲ್ಲಿ ಏಳು ಜನರ ಸ್ಥಿತಿ ಗಂಭೀರ, ಒಬ್ಬ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನವದೆಹಲಿಗೆ ಕರೆದೊಯ್ಯಲಾಗಿದೆ.