Bengaluru: ಸಂಚಾರದಟ್ಟಣೆಯಿಂದ ಕೂಡಿರುವ ಬೆಂಗಳೂರಿನಲ್ಲಿ (Bengaluru) ಆ್ಯಂಬುಲೆನ್ಸ್‌ಗಳ (ambulance) ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ‘ಇ-ಪಾತ್’ ಆ್ಯಪ್‌ನ್ನು (ePATH App)ವಿನ್ಯಾಸಗೊಳಿಸಲಾಗಿದೆ.
ಇದು ಟ್ರಾಫಿಕ್ ಸಿಗ್ನಲ್‌ಗಳನ್ನು (Traffic Signal) ತೆರವುಗೊಳಿಸಲು ಮತ್ತು ಕಡಿಮೆ ಸಂಚಾರದಟ್ಟಣೆ ಇರುವ ಮಾರ್ಗಗಳ ಬಗ್ಗೆ ಆ್ಯಂಬುಲೆನ್ಸ್ ಚಾಲಕರಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತದೆ.
ಆ್ಯಂಬುಲೆನ್ಸ್ ಮಾರ್ಗಗಳನ್ನು ಸುಗಮಗೊಳಿಸಲು, ಟ್ರಾಫಿಕ್ ಸಿಗ್ನಲ್‌ಗಳನ್ನು ತೆರವುಗೊಳಿಸಲು ಮತ್ತು ಸಂಚಾರ ದಟ್ಟಣೆ ಕಡಿಮೆ ಇರುವ ಮಾರ್ಗಗಳ ಬಗ್ಗೆ ಚಾಲಕರಿಗೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ‘ಇ-ಪಾತ್’ ಆ್ಯಪ್ ವಿನ್ಯಾಸಗೊಳಿಸಲಾಗಿದೆ.
ಇದು ಮೊಬೈಲ್ ಅಪ್ಲಿಕೇಷನ್ ನೋಂದಾಯಿತ ಆ್ಯಂಬುಲೆನ್ಸ್ ಗಳನ್ನು ಟ್ರ್ಯಾಕ್ ಮಾಡಲು ಕೇಂದ್ರ ಸಂಚಾರ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕಹೊಂದಿದೆ. ರಸ್ತೆ ತಡೆಗಳನ್ನು ನ್ಯಾವಿಗೇಟ್ ಮಾಡಲು ಸಹಕರಿಸುವ ಆದ್ಯತೆಯ ಎಚ್ಚರಿಕೆಗಳನ್ನು ನೀಡುತ್ತದೆ.
ಆ್ಯಂಬುಲೆನ್ಸ್ ಚಾಲಕರು ತಕ್ಷಣದ ಸಹಾಯಕ್ಕಾಗಿ ಈ ಅಪ್ಲಿಕೇಶನ್‌ನ SOS ವೈಶಿಷ್ಟ್ಯವನ್ನು ಬಳಸಬಹುದು. ಈ ಆ್ಯಪ್‌ನಿಂದ ವೇಗವಾದ ಮತ್ತು ಸುರಕ್ಷಿತ ತುರ್ತು ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳಬಹುದಾಗಿದೆ.
ePATH ಅಪ್ಲಿಕೇಷನ್ ಬಳಸಲು ಮೊದಲು ಆ್ಯಂಬುಲೆನ್ಸ್ ಚಾಲಕರು ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಗೂಗಲ್ ಪ್ಲೇ ಸ್ಟೋರ್‌ನಿಂದ ಇ-ಪಾತ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ, ಅದರಲ್ಲಿ ಪ್ರಾರಂಭ ಮತ್ತು ತಲುಪುವ ಸ್ಥಳವನ್ನು ನಮೂದಿಸಬೇಕು.
ಅದರಲ್ಲಿ ತುರ್ತುಸ್ಥಿತಿಯ ಆದ್ಯತೆಯನ್ನು ನಿರ್ದಿಷ್ಟ ಪಡಿಸಬೇಕು. ಹೃದಯಾಘಾತ ಅಥವಾ ತೀವ್ರ ಅಪಘಾತಗಳಂತಹ ಪ್ರಕರಣಗಳಲ್ಲಿ ಈ ಡಾಟಾವನ್ನು ನೇರವಾಗಿ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ಗೆ ಕಳುಹಿಸಲಾಗುತ್ತದೆ.
ಅದು ನಂತರ GPS ಆಧಾರಿತ ಅಡಾಪ್ಟಿವ್ ಸಿಗ್ನಲ್‌ಗಳ ಮೂಲಕ ಸರಿಯಾದ ಸಮಯಕ್ಕೆ ತುರ್ತು ವಾಹನಗಳು ತೆರಳುವ ಮಾರ್ಗವನ್ನು ತೆರವುಗೊಳಿಸುತ್ತದೆ.
ಆ್ಯಂಬುಲೆನ್ಸ್ ಟ್ರಾಫಿಕ್ ಸಿಗ್ನಲ್ ಬಳಿ ತೆರಳುತ್ತಿದ್ದಂತೆ ಅದರ ಚಲನೆಗೆ ಸಹಕಾರವಾಗಲು ಸಿಗ್ನಲ್‌ಗಳನ್ನು ತೆರವುಗೊಳಿಸಲಾಗುತ್ತದೆ. ಸಿಗ್ನಲ್‌ಗಳಿಲ್ಲದ ಪ್ರದೇಶಗಳಲ್ಲಿ ಆ್ಯಂಬುಲೆನ್ಸ್ ಪ್ರತಿ ಗಂಟೆಗೆ 5 ಕಿಲೋಮೀಟರ್‌ಗಿಂತ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದರೆ ಆಗ ಈ ಅಪ್ಲಿಕೇಷನ್ ನಿಯಂತ್ರಣ ಕೇಂದ್ರವನ್ನು ಎಚ್ಚರಿಸುತ್ತದೆ. ಅಲ್ಲಿನ ಸಂಚಾರದಟ್ಟಣೆಯನ್ನು ತೆರವುಗೊಳಿಸಲು ಪೊಲೀಸರಿಗೆ ಸೂಚಿಸುತ್ತದೆ.
ಒಟ್ಟಿನಲ್ಲಿ ಬೆಂಗಳೂರು ನಗರದ ಸಂಚಾರಿ ಪೊಲೀಸರು ಪರಿಚಯಿಸಿರುವ ಈ ಅಪ್ಲಿಕೇಷನ್ ಟ್ರಾಫಿಕ್‌ನಿಂದ ಉಂಟಾಗುವ ತುರ್ತುವಾಹನಗಳ ಸಂಚಾರ ವಿಳಂಬವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.