back to top
20.8 C
Bengaluru
Sunday, August 31, 2025
HomeBusinessEpsilon Group ಕರ್ನಾಟಕದಲ್ಲಿ ಭಾರಿ ಹೂಡಿಕೆ – EV ಬ್ಯಾಟರಿ ತಯಾರಿಕೆಗೆ ಉತ್ತೇಜನ

Epsilon Group ಕರ್ನಾಟಕದಲ್ಲಿ ಭಾರಿ ಹೂಡಿಕೆ – EV ಬ್ಯಾಟರಿ ತಯಾರಿಕೆಗೆ ಉತ್ತೇಜನ

- Advertisement -
- Advertisement -

Bengaluru: ಜಾಗತಿಕ ಮಟ್ಟದಲ್ಲಿ ಬ್ಯಾಟರಿ ಬಿಡಿಭಾಗಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಎಪ್ಸಿಲಾನ್ ಗ್ರೂಪ್ (Epsilon Group) ಕರ್ನಾಟಕದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಲು ಮುಂದಾಗಿದೆ. ರಾಜ್ಯದಲ್ಲಿ ₹15,350 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಇದು ಇವಿ ಬ್ಯಾಟರಿ ತಯಾರಿಕೆ, ಸಂಶೋಧನೆ ಹಾಗೂ ಪರೀಕ್ಷಾ ಘಟಕಗಳ ಸ್ಥಾಪನೆಗೆ ಬಳಸಲಿದೆ.

ಇನ್ವೆಸ್ಟ್ ಕರ್ನಾಟಕ 2025 ಸಮಾವೇಶದಲ್ಲಿ, ಎಪ್ಸಿಲಾನ್ ಗ್ರೂಪ್ ಮತ್ತು ಕರ್ನಾಟಕ ಸರ್ಕಾರ ಹೂಡಿಕೆ ಸಂಬಂಧ ಎಂಒಯುಗೆ ಸಹಿ ಹಾಕಿವೆ. ಈ ಹೂಡಿಕೆಯು ಭಾರತದ ಇವಿ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಿದ್ದು, ಚೀನಾದ ಆಮದು ಅವಲಂಬನೆ ತಗ್ಗಿಸಲು ಸಹಾಯ ಮಾಡಲಿದೆ.

ಬ್ಯಾಟರಿ ತಯಾರಿಕೆಗೆ ಪ್ರಮುಖ ಹೂಡಿಕೆ

  • ₹9,000 ಕೋಟಿ – ಗ್ರಾಫೈಟ್ ಆನೋಡ್ ತಯಾರಿಕೆಗೆ
  • ₹6,000 ಕೋಟಿ – ಎಲ್ಎಫ್ಪಿ ಕ್ಯಾಥೋಡ್ ತಯಾರಿಕೆಗೆ
  • ₹350 ಕೋಟಿ – ಆರ್‌ಅಂಡ್‌ಡಿ, ಟೆಸ್ಟಿಂಗ್ ಮತ್ತು ತರಬೇತಿ ಕೇಂದ್ರಗಳಿಗೆ
  • ಎಪ್ಸಿಲಾನ್ ಗ್ರೂಪ್ನ ಪ್ರಮುಖ ಸಂಸ್ಥೆಗಳು
  • ಎಪ್ಸಿಲಾನ್ ಅಡ್ವಾನ್ಸ್ಡ್ ಮೆಟೀರಿಯಲ್ಸ್ – ಗ್ರಾಫೈಟ್ ಆನೋಡ್ ತಯಾರಣೆ
  • ಎಪ್ಸಿಲಾನ್ ಕ್ಯಾಮ್ ಪ್ರೈ ಲಿ – ಎಲ್ಎಫ್ಪಿ ಕ್ಯಾಥೋಡ್ ಉತ್ಪಾದನೆ
  • ಇನ್ಸ್ಪೈರ್ ಎನರ್ಜಿ ರಿಸರ್ಚ್ ಸೆಂಟರ್ – ಸಂಶೋಧನೆ, ಪರೀಕ್ಷಾ ಕೇಂದ್ರ, ತರಬೇತಿ

ಈ ಹೂಡಿಕೆ ಭಾರತದ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ದೊಡ್ಡ ಪ್ರೇರಣೆ ನೀಡಲಿದ್ದು, ಸ್ಥಳೀಯ ಉತ್ಪಾದನೆ ಹೆಚ್ಚಳದಿಂದ ಚೀನಾದ ನಿಲಂಬನೆಯಿಂದ ಮುಕ್ತಗೊಳ್ಳಲು ಸಹಾಯ ಮಾಡಲಿದೆ.ವಿಕ್ರಮ್ ಹಂಡಾ ನೇತೃತ್ವದ ಎಪ್ಸಿಲಾನ್ ಗ್ರೂಪ್, ಮುಂಬೈ ಮೂಲದ ಕಂಪನಿಯಾಗಿದ್ದು, ಈಗ ಕರ್ನಾಟಕದಲ್ಲಿ ತನ್ನ ಪ್ರಭಾವ ಹೆಚ್ಚಿಸಲಿದೆ. ಈ ಹೂಡಿಕೆ, ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page