back to top
20.9 C
Bengaluru
Thursday, July 31, 2025
HomeBusinessEV ಸವಾರರಿಗೆ ಚಿಂತೆ, Charging ಸೌಕರ್ಯವಿಲ್ಲ: ಯೋಜನೆ ಕೈಬಿಟ್ಟ Energy Department

EV ಸವಾರರಿಗೆ ಚಿಂತೆ, Charging ಸೌಕರ್ಯವಿಲ್ಲ: ಯೋಜನೆ ಕೈಬಿಟ್ಟ Energy Department

- Advertisement -
- Advertisement -

Bengaluru: ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ (EV-electric vehicles) ವಾಹನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಇವಿಗೆ ಬೇಕಾದ ಚಾರ್ಜಿಂಗ್ ಸ್ಟೇಷನ್‌ಗಳು project ಹಾಗೆ ಏರಿಕೆಯಾಗುತ್ತಿಲ್ಲ.

ಇಂಧನ ಇಲಾಖೆ 2,500 ಹೊಸ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿತ್ತು. ಆದರೆ ಇದೀಗ ಈ ಯೋಜನೆಯನ್ನು ಕೈಬಿಟ್ಟಿದ್ದು, ಇವಿ ವಾಹನ ಸವಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಇವತ್ತಿನ ಸ್ಥಿತಿ ಹೇಗಿದೆ?

  • ಬೆಂಗಳೂರಿನಲ್ಲಿ ಈಗಾಗಲೇ 3.4 ಲಕ್ಷ ಎಲೆಕ್ಟ್ರಿಕ್ ವಾಹನಗಳಿವೆ.
  • ಇದರಲ್ಲಿ 2.98 ಲಕ್ಷ ದ್ವಿಚಕ್ರ, 23,516 ನಾಲ್ಕುಚಕ್ರ ಮತ್ತು 18,246 ತ್ರಿಚಕ್ರ ವಾಹನಗಳಿವೆ.
  • ಆದರೆ ಇವುಗಳಿಗೆ ಹೋಲಿಸಿ ಕೇವಲ 5,800 ಚಾರ್ಜಿಂಗ್ ಸ್ಟೇಷನ್‌ಗಳಷ್ಟೇ ಇವೆ.

ಯೋಜನೆ ಏಕೆ ಕೈಬಿಟ್ಟರು?

  • ಭೂಮಿ ಗುತ್ತಿಗೆಗಾಗಿ ಇತರೆ ಇಲಾಖೆಗಳಿಂದ ಸಹಕಾರ ದೊರೆತಿಲ್ಲ.
  • ಬೆಸ್ಕಾಂ ನೀಡಿದ ಸ್ಥಳಗಳಲ್ಲಿ ಕಾರ್ಯಾಚರಣೆ ಸಾಧ್ಯವಾಗಿಲ್ಲ.
  • ಯೋಜನೆ ಜಾರಿಗೊಳಿಸಲು ಖಾಸಗಿ ಏಜೆನ್ಸಿಗಳಿಗೆ ಹಣದ ತೊಂದರೆ ಇದೆ.
  • 2023–24ರಲ್ಲಿ 585 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಆದೇಶ ನೀಡಿದರೂ, ಒಂದು ಕೂಡ ಸ್ಥಾಪನೆಯಾಗಿಲ್ಲ.

ಇದು ಏಕೆ ಸಮಸ್ಯೆ ಆಗಿದೆ?: ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಪರಿಣಾಮವಾಗಿ ವಾಯುಮಾಲಿನ್ಯವೂ ಏರಿದೆ. ಸರ್ಕಾರ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುತ್ತಿದ್ದರೂ, ಅವಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಲು ನಿರಾಸಕ್ತಿ ತೋರಿಸುತ್ತಿದೆ. ಈ ಕಾರಣದಿಂದಾಗಿ, ಚಾರ್ಜಿಂಗ್ ಕಡಿಮೆಯಾದರೆ, ಇವಿ ಸವಾರರು ಸ್ಟೇಷನ್ ಹುಡುಕುವುದು ಹಾಗೂ ಕಾಯುವುದು ತುಂಬಾ ಕಷ್ಟವಾಗುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page