Gauribidanur : ಗೌರಿಬಿದನೂರು ನಗರದ ಕೋಟೆಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಆಶ್ರಯದಲ್ಲಿ, ಗೌರಿಬಿದನೂರು, ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲ್ಲೂಕುಗಳ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ, ವಿಶೇಷ ಮಕ್ಕಳಿಗೆ ಮೌಲ್ಯಾoಕನ ಶಿಬಿರವನ್ನು (Evaluation program for special children) ಹಮ್ಮಿಕೊಳ್ಳಲಾಗಿತ್ತು. ದೈಹಿಕ, ಮಾನಸಿಕ ದೋಷವುಳ್ಳ ಗೌರಿಬಿದನೂರಿನ 264, ಗುಡಿಬಂಡೆ 54, ಮತ್ತು ಬಾಗೇಪಲ್ಲಿಯ 120 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಶಿಬಿರದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಧಿಕಾರಿ ಶ್ರೀನಿವಾಸ ಮೂರ್ತಿ “ದೈಹಿಕ ಮತ್ತು ಮಾನಸಿಕ ನ್ಯೂನತೆ ಇರುವ ಮಕ್ಕಳಿಗೆ, ವಿಶೇಷ ಪೋಷಣೆ, ಅಗತ್ಯ ನೆರವು ನೀಡಿದರೆ ಅವರೂ ಸಹ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ, ಗುಡಿಬಂಡೆ ಬಿಇಒ ಕೃಷ್ಣಪ್ಪ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತ ವೈದ್ಯಧಿಕಾರಿ ಡಾ ಲಕ್ಷ್ಮೀಕಾಂತ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ ಹೇಮಾ, ನಗರಸಭೆ ಸದಸ್ಯ ರಾಜ್ ಕುಮಾರ್, ರಝಿಯಾ ತಬಸುಮ್, ಮಂಜುನಾಥ್, ಗಂಗರತ್ನಮ್ಮ, ಪ್ರಕಾಶ್, ವೈದ್ಯರ ತಂಡ, ಸ್ಕೌಟ್ಸ್ ಅಂಡ್ ಗೈಡ್ ನ ಗಿರಿಧರ್, ಮತ್ತು ಮಕ್ಕಳ ಪೋಷಕರು ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
The post ವಿಶೇಷ ಮಕ್ಕಳಿಗೆ ಮೌಲ್ಯಾoಕನ ಕಾರ್ಯಕ್ರಮ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.