back to top
26.3 C
Bengaluru
Friday, July 18, 2025
HomeBusinessTelecom companies ಗಳಿಗೆ ಬ್ಯಾಂಕ್ ಗ್ಯಾರಂಟಿಯಿಂದ ವಿನಾಯಿತಿ: Cabinet ಅನುಮೋದನೆ

Telecom companies ಗಳಿಗೆ ಬ್ಯಾಂಕ್ ಗ್ಯಾರಂಟಿಯಿಂದ ವಿನಾಯಿತಿ: Cabinet ಅನುಮೋದನೆ

- Advertisement -
- Advertisement -

New Delhi: ಟೆಲಿಕಾಂ ಕಂಪನಿಗಳಿಗೆ (Telecom company) ಬ್ಯಾಂಕ್ ಗ್ಯಾರಂಟಿ ಒದಗಿಸುವುದು ಕಡ್ಡಾಯವಿಲ್ಲ ಎಂಬ ನಿರ್ಧಾರಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

2022ಕ್ಕೆ ಮುನ್ನ ಖರೀದಿಸಲಾದ ಸ್ಪೆಕ್ಟ್ರಂಗಾಗಿ ಈ ವಿನಾಯಿತಿ ಅನ್ವಯವಾಗಲಿದೆ. ಟೆಲಿಕಾಂ ಸಂಸ್ಥೆಗಳು ಸರ್ಕಾರಕ್ಕೆ ಒಟ್ಟು ₹30,000 ಕೋಟಿ ಗ್ಯಾರಂಟಿ ಬಾಕಿ ಇಟ್ಟುಕೊಂಡಿವೆ. ಇದರಲ್ಲಿ ₹24,700 ಕೋಟಿ ಮೊತ್ತ ವೊಡಾಫೋನ್ ಐಡಿಯಾಗೆ (Vodafone Idea) ಸಂಬಂಧಿಸಿದ್ದು, ಈ ನಿರ್ಧಾರವು ಸಂಸ್ಥೆಗೆ ಪ್ರಮುಖ ಸಹಾಯಕರಿಯಾಗಿದೆ.

5ಜಿ ಸೆಕ್ಟರ್‌ನಲ್ಲಿ ಜಿಯೋ ಮತ್ತು ಏರ್ಟೆಲ್ (Jio and Airtel) ಜೊತೆಗೆ ಸ್ಪರ್ಧಿಸುತ್ತಿರುವ ವೊಡಾಫೋನ್ ಐಡಿಯಾ, ಈ ವಿನಾಯಿತಿಯಿಂದ ತನ್ನ ಹೂಡಿಕೆಯನ್ನು ಸುಗಮಗೊಳಿಸಲು ಸಾಧ್ಯವಾಗುತ್ತದೆ. ಈ ಬೆಳವಣಿಗೆಯ ಪರಿಣಾಮವಾಗಿ ವೊಡಾಫೋನ್ ಷೇರು ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಹೆಚ್ಚಿನ ಸ್ಪೆಕ್ಟ್ರಂ ಶುಲ್ಕಗಳು ಮತ್ತು ಎಜಿಆರ್ ಬಾಕಿಗಳು ಟೆಲಿಕಾಂ ಕಂಪನಿಗಳಿಗೆ ಆರ್ಥಿಕ ಒತ್ತಡವನ್ನು ಉಂಟುಮಾಡಿವೆ. ಬ್ಯಾಂಕ್ ಗ್ಯಾರಂಟಿಗಳಿಂದ ವಿನಾಯಿತಿಯ ಮೂಲಕ ಈ ಒತ್ತಡವನ್ನು ನಿವಾರಿಸಲು ಸರ್ಕಾರದ ಕ್ರಮ ತಂತ್ರಜ್ಞಾನದ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.

ಸರ್ಕಾರ ನೀಡಿದ ವಿನಾಯಿತಿ ಸಾಲದ ಮನ್ನಾ ಅಲ್ಲ, ಕೇವಲ ಬ್ಯಾಂಕ್ ಗ್ಯಾರಂಟಿ ಸಂಬಂಧಿತ ವಿನಾಯಿತಿ. ಈ ಕ್ರಮದಿಂದ ವೊಡಾಫೋನ್ ಐಡಿಯಾ ಹೊಸ ಸಾಲ ಪಡೆಯಲು ಹಾಗೂ ತನ್ನ ಸೇವೆಯನ್ನು ವಿಸ್ತರಿಸಲು ಅನುಕೂಲವಾಗುತ್ತದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page