Home News Namibia Under-19 ತಂಡಕ್ಕೆ ಹೊಸ ನಾಯಕ Faf du Plessis

Namibia Under-19 ತಂಡಕ್ಕೆ ಹೊಸ ನಾಯಕ Faf du Plessis

Faf du Plessis

ನಮೀಬಿಯಾ ಅಂಡರ್-19 ಕ್ರಿಕೆಟ್ ತಂಡ (Namibia Under-19 cricket team) ಸುದ್ದಿಯಲ್ಲಿದೆ. ಇದರ ಮುಖ್ಯ ಕಾರಣ ಹೊಸ ನಾಯಕನಾಗಿ ಫಾಫ್ ಡುಪ್ಲೆಸಿಸ್ (Faf du Plessis) ಆಯ್ಕೆಯಾಗಿರುವುದು. ಆದರೆ, ಇದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಅಲ್ಲ. ಬದಲಿಗೆ, ನಮೀಬಿಯಾದ ಯುವ ಕ್ರಿಕೆಟಿಗನಾಗಿದ್ದಾರೆ.

ಮುಂಬರುವ ಅಂಡರ್-19 ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳಿಗಾಗಿ ಆಯ್ಕೆಯಾಗಿರುವ ನಮೀಬಿಯಾ ತಂಡಕ್ಕೆ 17 ವರ್ಷದ ಯುವ ಫಾಫ್ ಡುಪ್ಲೆಸಿಸ್ ನಾಯಕನಾಗಿದ್ದಾರೆ. ಹೆಸರು ಒಂದೇ ಆಗಿರುವುದರಿಂದ, ಆರ್‌ಸಿಬಿ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಹೆಸರು ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಯುವ ನಾಯಕ ಬಲಗೈ ಬ್ಯಾಟ್ಸ್‌ಮನ್ ಹಾಗೂ ಲೆಗ್‌ಸ್ಪಿನ್ನರ್ ಆಗಿದ್ದಾರೆ. ಈ ಹಿಂದೆ ಅವರು ನಮೀಬಿಯಾ ಪರ ಮೂರು ಪಂದ್ಯಗಳನ್ನು ಆಡಿದ್ದಾರೆ. ಮಾರ್ಚ್ 28ರಿಂದ ಪ್ರಾರಂಭವಾಗುವ ಡಿವಿಷನ್ 1 ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ನೈಜೀರಿಯಾದ ಲಾಗೋಸ್‌ನಲ್ಲಿ ನಡೆಯಲಿರುವ ಈ ಅರ್ಹತಾ ಪಂದ್ಯಗಳಲ್ಲಿ ನಮೀಬಿಯಾ ತಂಡ ಕೀನ್ಯಾ, ನೈಜೀರಿಯಾ, ಸಿಯೆರಾ ಲಿಯೋನ್, ತಾಂಜಾನಿಯಾ ಮತ್ತು ಉಗಾಂಡಾ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ ಗೆದ್ದರೆ, 2026ರಲ್ಲಿ ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸುವ ಅಂಡರ್-19 ವಿಶ್ವಕಪ್‌ಗೆ ನಮೀಬಿಯಾ ತಂಡ ಅರ್ಹತೆ ಪಡೆಯಲಿದೆ.

ನಮೀಬಿಯಾ ಅಂಡರ್-19 ತಂಡದ ಸದಸ್ಯರು


ನಾಯಕ: ಫಾಫ್ ಡುಪ್ಲೆಸಿಸ್. ಅನ್ಯ ಆಟಗಾರರು: ಆಡ್ರಿಯನ್ ಕೋಟ್ಜೀ, ಬೆನ್ ಬ್ರಾಸ್ಸೆಲ್, ಡ್ಯಾನ್ ಬ್ರಾಸ್ಸೆಲ್, ಎರಿಕ್ ಲಿಂಟ್ವೆಲ್ಟ್, ಹೆನ್ರಿ ಗ್ರಾಂಟ್, ಜಾಂಕೊ ಎಂಗೆಲ್ಬ್ರೆಕ್ಟ್, ಜೂನಿಯನ್ ತಾನ್ಯಾಂಡಾ, ಲಿಯಾಮ್ ಬೆಸ್ಸನ್, ಲುಕಾ ಮೈಕೆಲೊ, ಮ್ಯಾಕ್ಸ್ ಹೆಂಗೊ, ರೋವನ್ ವ್ಯಾನ್ ವುರೆನ್, ಟಿಯಾನ್ ವ್ಯಾನ್ ಡೆರ್ ಮೆರ್ವೆ, ವಾಲ್ಡೊ ಸ್ಮಿತ್.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version