
ನಮೀಬಿಯಾ ಅಂಡರ್-19 ಕ್ರಿಕೆಟ್ ತಂಡ (Namibia Under-19 cricket team) ಸುದ್ದಿಯಲ್ಲಿದೆ. ಇದರ ಮುಖ್ಯ ಕಾರಣ ಹೊಸ ನಾಯಕನಾಗಿ ಫಾಫ್ ಡುಪ್ಲೆಸಿಸ್ (Faf du Plessis) ಆಯ್ಕೆಯಾಗಿರುವುದು. ಆದರೆ, ಇದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಅಲ್ಲ. ಬದಲಿಗೆ, ನಮೀಬಿಯಾದ ಯುವ ಕ್ರಿಕೆಟಿಗನಾಗಿದ್ದಾರೆ.
ಮುಂಬರುವ ಅಂಡರ್-19 ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳಿಗಾಗಿ ಆಯ್ಕೆಯಾಗಿರುವ ನಮೀಬಿಯಾ ತಂಡಕ್ಕೆ 17 ವರ್ಷದ ಯುವ ಫಾಫ್ ಡುಪ್ಲೆಸಿಸ್ ನಾಯಕನಾಗಿದ್ದಾರೆ. ಹೆಸರು ಒಂದೇ ಆಗಿರುವುದರಿಂದ, ಆರ್‌ಸಿಬಿ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಹೆಸರು ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಯುವ ನಾಯಕ ಬಲಗೈ ಬ್ಯಾಟ್ಸ್‌ಮನ್ ಹಾಗೂ ಲೆಗ್‌ಸ್ಪಿನ್ನರ್ ಆಗಿದ್ದಾರೆ. ಈ ಹಿಂದೆ ಅವರು ನಮೀಬಿಯಾ ಪರ ಮೂರು ಪಂದ್ಯಗಳನ್ನು ಆಡಿದ್ದಾರೆ. ಮಾರ್ಚ್ 28ರಿಂದ ಪ್ರಾರಂಭವಾಗುವ ಡಿವಿಷನ್ 1 ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ನೈಜೀರಿಯಾದ ಲಾಗೋಸ್‌ನಲ್ಲಿ ನಡೆಯಲಿರುವ ಈ ಅರ್ಹತಾ ಪಂದ್ಯಗಳಲ್ಲಿ ನಮೀಬಿಯಾ ತಂಡ ಕೀನ್ಯಾ, ನೈಜೀರಿಯಾ, ಸಿಯೆರಾ ಲಿಯೋನ್, ತಾಂಜಾನಿಯಾ ಮತ್ತು ಉಗಾಂಡಾ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ ಗೆದ್ದರೆ, 2026ರಲ್ಲಿ ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸುವ ಅಂಡರ್-19 ವಿಶ್ವಕಪ್‌ಗೆ ನಮೀಬಿಯಾ ತಂಡ ಅರ್ಹತೆ ಪಡೆಯಲಿದೆ.
ನಮೀಬಿಯಾ ಅಂಡರ್-19 ತಂಡದ ಸದಸ್ಯರು
ನಾಯಕ: ಫಾಫ್ ಡುಪ್ಲೆಸಿಸ್. ಅನ್ಯ ಆಟಗಾರರು: ಆಡ್ರಿಯನ್ ಕೋಟ್ಜೀ, ಬೆನ್ ಬ್ರಾಸ್ಸೆಲ್, ಡ್ಯಾನ್ ಬ್ರಾಸ್ಸೆಲ್, ಎರಿಕ್ ಲಿಂಟ್ವೆಲ್ಟ್, ಹೆನ್ರಿ ಗ್ರಾಂಟ್, ಜಾಂಕೊ ಎಂಗೆಲ್ಬ್ರೆಕ್ಟ್, ಜೂನಿಯನ್ ತಾನ್ಯಾಂಡಾ, ಲಿಯಾಮ್ ಬೆಸ್ಸನ್, ಲುಕಾ ಮೈಕೆಲೊ, ಮ್ಯಾಕ್ಸ್ ಹೆಂಗೊ, ರೋವನ್ ವ್ಯಾನ್ ವುರೆನ್, ಟಿಯಾನ್ ವ್ಯಾನ್ ಡೆರ್ ಮೆರ್ವೆ, ವಾಲ್ಡೊ ಸ್ಮಿತ್.