back to top
20.3 C
Bengaluru
Sunday, August 31, 2025
HomeIndiaFake doctor ನ ವಿಡಿಯೋ ಕಾಲ್ ಹೆರಿಗೆ: ಮಹಿಳೆ ಸಾವು, ವೈದ್ಯ-ಸಿಬ್ಬಂದಿ ಪರಾರಿ

Fake doctor ನ ವಿಡಿಯೋ ಕಾಲ್ ಹೆರಿಗೆ: ಮಹಿಳೆ ಸಾವು, ವೈದ್ಯ-ಸಿಬ್ಬಂದಿ ಪರಾರಿ

- Advertisement -
- Advertisement -

Rohtas (Bihar): ನಕಲಿ ವೈದ್ಯನ (Fake doctor) ಅವಿವೇಕದ ಕ್ರಿಯೆಯಿಂದ ಬಿಹಾರದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಗೋರಾರಿ ಎಂಬಲ್ಲಿ ಘಟನೆಯು ನಡೆದಿದೆ. ನಕಲಿ ವೈದ್ಯನು ಇನ್ನೊಬ್ಬ ವೈದ್ಯನಿಂದ ವೀಡಿಯೋ ಕಾಲ್ ಮೂಲಕ ಮಾರ್ಗದರ್ಶನ ಪಡೆದು ಶಸ್ತ್ರಚಿಕಿತ್ಸೆ ನಡೆಸಿದಾಗ, ಮಹಿಳೆ ಸಾವನ್ನಪ್ಪಿದಳು. ಅದೃಷ್ಟವಶಾತ್ ಮಗುವು ಜೀವಂತ ಉಳಿದಿದೆ.

ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ವೈದ್ಯರು ಮತ್ತು ಖಾಸಗಿ ಕ್ಲಿನಿಕ್ ಸಿಬ್ಬಂದಿ ಪರಾರಿಯಾಗಿದ್ದಾರೆ. ಮೃತ ಮಹಿಳೆಯ ಸಹೋದರಿಯ ಹೇಳಿಕೆಯಿಂದಾಗಿ ಘಟನೆಯು ಇನ್ನಷ್ಟು ಭೀಕರವಾಗಿ ಹೊರಬಿದ್ದಿದೆ.

ಸಹೋದರಿ ಹೇಳುವಂತೆ, ಆರಂಭದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಶಾ ಕಾರ್ಯಕರ್ತೆಯೊಬ್ಬರು ಖಾಸಗಿ ಕ್ಲಿನಿಕ್‌ಗೆ ಕರೆದೊಯ್ದು ಅಲ್ಲಿ ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದರು. ವಿಡಿಯೋ ಕಾಲ್ ನಲ್ಲಿ ವೈದ್ಯನ ಮಾರ್ಗದರ್ಶನದಂತೆ ಶಸ್ತ್ರಚಿಕಿತ್ಸೆ ನಡೆದಿತು. ಆದರೆ ಆರೋಗ್ಯ ಹದಗೆಟ್ಟ ಮಹಿಳೆ ಸಾವನ್ನಪ್ಪಿದಳು.

“ಹೆರಿಗೆ ಬಳಿಕ ಪತ್ನಿಯನ್ನು ನೋಡಲು ಹೋದಾಗ, ಆಕೆ ಸತ್ತಿದ್ದಳು. ಆಸ್ಪತ್ರೆಯವರು ‘ಜಿಲ್ಲಾಸ್ಪತ್ರೆಗೆ ಕರೆದೊಯ್ಯಿರಿ, ನಾವು ಬರುತ್ತೇವೆ’ ಎಂದರು. ಆದರೆ ನಾವು ಆಸ್ಪತ್ರೆಗೆ ಬಂದ ನಂತರ ಎಲ್ಲರೂ ಪರಾರಿಯಾದರು,” ಎಂದು ಪತಿ ವಿನೋದ್ ಪ್ರಸಾದ್ ಹೇಳಿದರು.

ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳೀಯ ಪೊಲೀಸರು ಖಾಸಗಿ ಆಸ್ಪತ್ರೆಗೆ ಬೀಗ ಜಡಿಸಿದ್ದಾರೆ. ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ನಕಲಿ ವೈದ್ಯ ಮತ್ತು ಆಶಾ ಕಾರ್ಯಕರ್ತೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಇದು ಜನರ ಜೀವದೊಂದಿಗೆ ಆಟವಾಡುವ ಅಸಮಾನ್ಯ ಘಟನೆ. ಇಂತಹ ನಕಲಿ ವೈದ್ಯರನ್ನು ಪತ್ತೆಹಚ್ಚಿ, ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page