France: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಿಂದ ಪಾಕಿಸ್ತಾನ ಪಿತೂರಿ ಪ್ರಚಾರ ನಡೆಸಿತ್ತು. ಯುದ್ಧದಲ್ಲಿ ಜಯಶಾಲಿಯಾದೆವೆಂದು ಬೀಗಿದರೂ, ವಾಸ್ತವ ಏನೆಂದು ಇಡೀ ವಿಶ್ವಕ್ಕೆ ಗೊತ್ತಾಯಿತು.
ಇತ್ತೀಚೆಗೆ ಫ್ರೆಂಚ್ ಗುಪ್ತಚರ ಸಂಸ್ಥೆ ಬಹಿರಂಗಪಡಿಸಿದ ಹೊಸ ವರದಿಯ ಪ್ರಕಾರ, ಈ ಆಪರೇಷನ್ ವೇಳೆ ಪಾಕಿಸ್ತಾನ ಜತೆಗೆ ಚೀನಾದೂ ರಫೇಲ್ ವಿಮಾನಗಳ ವಿರುದ್ಧ ಡಿಜಿಟಲ್ ದಾಳಿ ನಡೆಸಿತ್ತು. ಈ ದಾಳಿಯ ಉದ್ದೇಶ ರಫೇಲ್ ವಿಮಾನಗಳ ಭದ್ರತೆ ಕುರಿತಾಗಿ ಅಪಪ್ರಚಾರ ಮಾಡುವುದು ಮತ್ತು ಮಾರಾಟ ಕಡಿಮೆ ಮಾಡುವುದು.
ಭಾರತ-ಪಾಕಿಸ್ತಾನ ನಡುವಿನ ಸೈನಿಕ ಸಂಘರ್ಷದ ಬಳಿಕ ಭಾರತೀಯ ವಾಯುಪಡೆಯು SCALP ಕ್ಷಿಪಣಿಗಳ ಸಹಾಯದಿಂದ ಭಯೋತ್ಪಾದಕರ ಅಡಗುತಾಣಗಳ ಮೇಲೆ ಯಶಸ್ವಿ ದಾಳಿ ನಡೆಸಿತ್ತು. ಇದರ ನಂತರ ಚೀನಾ, “ರಫೇಲ್ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿದೆ” ಎಂಬ ಸುಳ್ಳು ಸುದ್ದಿ ಹರಡಲು ಪ್ರಾರಂಭಿಸಿತು. ಇದನ್ನು ತಮ್ಮ ಶಸ್ತ್ರಾಸ್ತ್ರ ಬಳಸಿ ಮಾಡಲಾಗಿದೆ ಎಂದು ಕೂಡಾ ಹೇಳಿತ್ತಂತೆ!
ಚೀನಾ ತನ್ನ ದೂತಾವಾಸಗಳು, ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪ್ರಾಕ್ಸಿ ಚಾನೆಲ್‌ಗಳ ಮೂಲಕ ಸುಳ್ಳು ಸುದ್ದಿ ಹರಡಿದಿದೆ. ಇವುಗಳಲ್ಲಿ “ಭಾರತದ ರಫೇಲ್‌ಗಳು ನಾಶವಾಗಿದೆ” ಎಂದು ದೋಷಾರೋಪಣೆ ಮಾಡಲಾಗಿದೆ.
ಈ ಎಲ್ಲಾ ಕೃತ್ಯಗಳ ಹಿಂದೆ ಎರಡು ಮುಖ್ಯ ಉದ್ದೇಶಗಳಿದ್ದವು
- ರಫೇಲ್ ವಿಮಾನದ ವಿಶ್ವಾಸಾರ್ಹತೆಯನ್ನು ಶಂಕೆಯಡಿಗೊಳಿಸುವುದು
- ಚೀನಾದ J-10 ಯುದ್ಧ ವಿಮಾನಗಳ ಪ್ರಚಾರ ಮಾಡುವುದು
- ಈ ಪರಿಣಾಮವಾಗಿ ಇಂಡೋನೇಷ್ಯಾ ಸೇರಿದಂತೆ ಕೆಲ ದೇಶಗಳು ಈಗ ರಫೇಲ್ ಖರೀದಿಯನ್ನು ಮರುಪರಿಶೀಲಿಸುತ್ತಿವೆ.
ಪ್ರತಿಕ್ರಿಯೆಗಳು
- ಫ್ರೆಂಚ್ ರಕ್ಷಣಾ ಸಚಿವಾಲಯ: “ರಫೇಲ್‌ಗಳು ಅಪಾರ ಯಶಸ್ಸು ಸಾಧಿಸಿವೆ, SCALP ಕ್ಷಿಪಣಿಗಳ ದಾಳಿ ನಿಖರವಾಗಿದೆ.”
- ಡಸಾಲ್ಟ್ ಏವಿಯೇಷನ್ ಸಿಇಒ ಎರಿಕ್ ಟ್ರಾಪಿಯರ್: “ಪಾಕಿಸ್ತಾನ ಮತ್ತು ಚೀನಾ ಮಾಧ್ಯಮ ವರದಿಗಳು ಸುಳ್ಳು, ದಾರಿ ತಪ್ಪಿಸುವ ಪ್ರಯತ್ನ.”
ಈ ಘಟನೆ ಭಾರತ-ಫ್ರಾನ್ಸ್ ನಡುವಿನ ರಕ್ಷಣಾ ನಂಟು ಗಟ್ಟಿ ಮಾಡಿದ್ದು, ತಂತ್ರಜ್ಞಾನವಷ್ಟೇ ಅಲ್ಲದೆ ಮಾಹಿತಿ ಯುದ್ಧವೂ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಇಂತಹ ಪ್ರಚಾರಗಳು ಇತರೆ ದೇಶಗಳ ನಿರ್ಧಾರಗಳ ಮೇಲೂ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.