Bengaluru: ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು ಮಹಿಳೆಯರಿಗೆ ಹಣಕಾಸು ಸ್ವಾತಂತ್ರ್ಯ ನೀಡಲು ಸರ್ಕಾರ ಹೊಸ ಕ್ರಮಗಳನ್ನು ಕೈಗೊಂಡಿದೆ. ಕುಟುಂಬ ಪಿಂಚಣಿ ನೀತಿಯಲ್ಲಿ (Family Pension Reforms) ಮಾಡಲಾದ ಸುಧಾರಣೆಗಳಿಂದ ವಿಚ್ಛೇದಿತೆಯರು, ವಿಧವೆಯರು ಮತ್ತು ಉದ್ಯೋಗದಲ್ಲಿರುವ ಮಹಿಳೆಯರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಗಂಡನಿಂದ ವಿಚ್ಛೇದನ ಪಡೆದ ಅಥವಾ ಬೇರ್ಪಟ್ಟ ಹೆಣ್ಮಕ್ಕಳಿಗೆ ಈಗ ಪೋಷಕರ ಕುಟುಂಬ ಪಿಂಚಣಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಡಿವೋರ್ಸ್ ಅರ್ಜಿ ಸಲ್ಲಿಸಿದ ತಕ್ಷಣವೇ ಮಹಿಳೆ ಪಿಂಚಣಿ ಪಡೆಯಲು ಅರ್ಹಳಾಗಲಿದ್ದಾರೆ.
ಮರುವಿವಾಹ ಮಾಡಿದ ಸಂತಾನಹೀನ ವಿಧವೆಯರು ಪತಿಯ ಪಿಂಚಣಿಯನ್ನು ಮುಂದುವರಿಸಿ ಪಡೆಯಲು ಅನುಮತಿ ಇದೆ. ಆದರೆ, ಆಕೆಯ ಆದಾಯ ಕನಿಷ್ಠ ಪಿಂಚಣಿ ಮಟ್ಟಕ್ಕಿಂತ ಕಡಿಮೆ ಇರಬೇಕು.
ಗಂಡನಿಗೆ ವಿಚ್ಛೇದನ ನೀಡಿದ ಅಥವಾ ನೀಡಲು ಉದ್ದೇಶಿಸಿರುವ ಮಹಿಳಾ ಪಿಂಚಣಿದಾರರು, ತಮ್ಮ ಪಿಂಚಣಿಗೆ ಗಂಡನ ಬದಲು ಮಕ್ಕಳನ್ನು ನಾಮಿನೇಟ್ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಮಗುವಿನ ಭದ್ರತೆಗೆ ಒಂಟಿ ತಾಯಂದಿರಿಗೆ ಎರಡು ವರ್ಷಗಳ ಚೈಲ್ಡ್ ಕೇರ್ ಲೀವ್ ಸೌಲಭ್ಯ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಅವರು ವಿದೇಶ ಪ್ರವಾಸಕ್ಕೂ ಹೋಗಬಹುದು. ಹೆರಿಗೆಯ ನಂತರ, ಮಗು ಸತ್ತರೂ, ಮಹಿಳೆಯರಿಗೆ ಪೇಯ್ಡ್ ಮ್ಯಾಟರ್ನಿಟಿ ಲೀವ್ ನೀಡಲಾಗುವುದು.ಈ
ಹೊಸ ನೀತಿಗಳು ಮಹಿಳೆಯರಿಗೆ ಭದ್ರತೆ, ಸ್ವಾತಂತ್ರ್ಯ ಮತ್ತು ಸಮಾನತೆ ಒದಗಿಸಲು ದೊಡ್ಡ ಹೆಜ್ಜೆಯಾಗಿದೆ.








