back to top
25.8 C
Bengaluru
Monday, July 21, 2025
HomeReports and AnnouncementAgricultureರೈತರು ವೈವಿಧ್ಯಮಯ ಕೃಷಿ ಕಡೆ ಗಮನ ಹರಿಸಲಿ: Minister Shivraj Singh Chouhan

ರೈತರು ವೈವಿಧ್ಯಮಯ ಕೃಷಿ ಕಡೆ ಗಮನ ಹರಿಸಲಿ: Minister Shivraj Singh Chouhan

- Advertisement -
- Advertisement -

ರೈತರು ಪಾರಂಪರಿಕ ಕೃಷಿಯಲ್ಲೇ ಸೀಮಿತರಾಗದೆ, ಹೊಸ ವಿಧಾನಗಳಾದ ಪ್ರೊಸೆಸಿಂಗ್ ಮತ್ತು ರಫ್ತು ಕ್ರಿಯೆಗಳತ್ತ ಗಮನ ಹರಿಸಬೇಕು ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Minister Shivraj Singh Chouhan) ಹೇಳಿದರು. ಕೃಷಿಯ ಜಿಡಿಪಿ ಕೊಡುಗೆ ಈಗ 5.4% ಆಗಿದ್ದು, ಇದು ಶ್ಲಾಘನೀಯ ಬೆಳವಣಿಗೆ ಎಂದು ಅವರು ಹೇಳಿದರು.

ಡ್ರ್ಯಾಗನ್ ಫ್ರೂಟ್ ಕೃಷಿಯಲ್ಲಿ ಆರಂಭದ ಎರಡು ವರ್ಷ ಲಾಭ ಕಡಿಮೆ ಇದ್ದರೂ, ಮೂರನೇ ವರ್ಷದಿಂದ 6-7 ಲಕ್ಷ ರೂ. ಗಳಿಸಬಹುದು ಎಂದರು. ರೈತರು ಹೊಸ ಪ್ರಯೋಗಗಳನ್ನು ಅಳವಡಿಸಿಕೊಂಡು ನವೀನತೆ ತರುತ್ತಿದ್ದಾರೆ ಎಂಬುದನ್ನು ಸಚಿವರು ಶ್ಲಾಘಿಸಿದರು.

ನಕಲಿ ಕೀಟನಾಶಕಗಳು ಹಾಗೂ ಬೀಜಗಳ ತಯಾರಕರ ವಿರುದ್ಧ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ‘ಒಂದು ರಾಷ್ಟ್ರ – ಒಂದು ಕೃಷಿ – ಒಂದು ತಂಡ’ ದೃಷ್ಟಿಕೋನದೊಂದಿಗೆ ಕಾರ್ಯ ನಡೆಯುತ್ತಿದೆ.

ಸಂಶೋಧನೆಗಳು ಲ್ಯಾಬ್‌ನಲ್ಲೇ ಉಳಿಯದೆ ರೈತನ ಹೊಲಕ್ಕೆ ತಕ್ಷಣ ತಲುಪಬೇಕು. ರೈತರಿಗೆ ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸಿಕ್ಕು ತಕ್ಷಣ ಪ್ರಯೋಜನ ಆಗಬೇಕು ಎಂದು ಹೇಳಿದರು.

145 ಕೋಟಿ ಜನರಿಗೆ ಪೋಷಕ ಆಹಾರ ಪೂರೈಸುವ ಗುರಿಯೊಂದಿಗೆ ಕೆಲಸ ನಡೆಯುತ್ತಿದೆ. ಈ ಮೂಲಕ ಆಹಾರ ಭದ್ರತೆ ಸಾಧಿಸಲು ಪ್ರಯತ್ನಿಸಲಾಗುತ್ತಿದೆ.

ಪ್ರತಿ ಆರು ತಿಂಗಳಿಗೆ ನಡೆಯುವ ಚುನಾವಣೆಯಿಂದ ದೇಶಕ್ಕೆ ದೊಡ್ಡ ನಷ್ಟ ಉಂಟಾಗುತ್ತಿದೆ. ಚುನಾವಣೆ ನಡೆಯುವಾಗ ನವೀಕರಣ ಮತ್ತು ಅಭಿವೃದ್ಧಿ ಯೋಜನೆಗಳು ಸ್ಥಗಿತವಾಗುತ್ತವೆ ಎಂದು ಚೌಹಾಣ್ ವಿಷಾದಿಸಿದರು.

ಸಚಿವರು, ಶಾಸಕರು, ಸಂಸದರು, ಪ್ರತಿಷ್ಠಿತ ನಾಯಕರನ್ನು ಆಯಾ ರಾಜ್ಯಗಳ ಚುನಾವಣೆಗೆ ನಿರಂತರವಾಗಿ ತೊಡಗಿಸಿಕೊಂಡಿರುವುದರಿಂದ ಅವರು ತಮ್ಮ ಮುಖ್ಯ ಕೆಲಸಗಳಿಂದ ದೂರವಾಗುತ್ತಿದ್ದಾರೆ. ಇದು ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮೇ 29ರಿಂದ ಆರಂಭವಾದ ’ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ಜೂನ್ 12ರವರೆಗೆ ನಡೆಯಲಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ರೈತರಿಗೆ ಭೇಟಿ ನೀಡಿ ಸಂವಾದ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page