back to top
26.3 C
Bengaluru
Friday, July 18, 2025
HomeIndiaPatna ದಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಿಂದ ಮಹಿಳಾ Constable ಸಾವು, ಇಬ್ಬರು ಗಾಯ

Patna ದಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಿಂದ ಮಹಿಳಾ Constable ಸಾವು, ಇಬ್ಬರು ಗಾಯ

- Advertisement -
- Advertisement -

Patna, Bihar: ಪಾಟ್ನಾದ (Patna) SK ಪುರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಟಲ್ ಪಾತ್‌ ಪ್ರದೇಶದಲ್ಲಿ ಬುಧವಾರ ಭೀಕರ ರಸ್ತೆ ಅಪಘಾತ ನಡೆದಿದೆ. ವಾಹನ ತಪಾಸಣೆ ನಡೆಯುತ್ತಿರುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಕಾರು ಒಂದು ನೇರವಾಗಿ ಪೊಲೀಸರ ಮೆಲೆ ಹರಿದಿದೆ. ಈ ದುರ್ಘಟನೆಯಲ್ಲಿ ಮಹಿಳಾ ಕಾನ್ಸ್ಟೇಬಲ್ ಕುಮಾರಿ ಕೋಮಲ್ ಸ್ಥಳದಲ್ಲೇ ಸಾವನ್ನಪ್ಪಿದರು.

ಅಪಘಾತದಲ್ಲಿ ಸಬ್ ಇನ್ಸ್‌ಪೆಕ್ಟರ್ ಮತ್ತು ಇನ್ನೊಬ್ಬ ಮಹಿಳಾ ಕಾನ್ಸ್ಟೇಬಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರನ್ನೂ ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಕುಮಾರಿ ಕೋಮಲ್ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಘಾತಕ್ಕೀಡಾದ ಸ್ಕಾರ್ಪಿಯೋ ಕಾರಿನಲ್ಲಿ ಪ್ರಮುಖ ರಾಜಕೀಯ ಪಕ್ಷದ ಸ್ಟಿಕರ್ ಇದ್ದು, ವಾಹನ ಸಂಖ್ಯೆ BRO1HT8437 ಆಗಿದೆ. ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದರೂ, ಇದೀಗ ಆತನನ್ನು ಬಂಧಿಸಲಾಗಿದೆ.

ಈ ದುರ್ಘಟನೆ ಬಳಿಕ, ರಸ್ತೆಯ ಮೇಲೆ ವಾಹನ ತಪಾಸಣೆ ಮಾಡುವ ಪೊಲೀಸ್ ಸಿಬ್ಬಂದಿಗೆ ಬೇಕಾದಷ್ಟು ಸುರಕ್ಷತೆ ಒದಗಿಸುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. ಹೆಚ್ಚಿನ ಕಟ್ಟೆನೆಲೆ ಅಥವಾ ಬ್ಯಾರಿಕೇಡ್ ಗಳಿಲ್ಲದ ತಾಪಾಸಣಾ ಸ್ಥಳಗಳು ಇಂತಹ ಅಪಘಾತಗಳಿಗೆ ಕಾರಣವಾಗುತ್ತಿರುವುದಾಗಿ ವ್ಯಕ್ತಪಡಿಸಲಾಗಿದೆ.

ಪಾಟ್ನಾ ಎಸ್‌ಎಸ್‌ಪಿ ಅವಕಾಶ್ ಕುಮಾರ್ ಅವರು, ಘಟನೆಯ ಕುರಿತು ಮಾತನಾಡುತ್ತಾ, ಈ ಅಪಘಾತವೊಂದು ದುರಂತವಾಗಿದ್ದು, ಪೊಲೀಸರ ಸುರಕ್ಷತೆಯ ಕ್ರಮಗಳನ್ನು ಪುನರ್ವಿಚಾರಿಸಬೇಕಾದ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ತೀವ್ರ ಅಪಘಾತದಿಂದ ಕಾನ್ಸ್ಟೇಬಲ್ ಸಾವನ್ನಪ್ಪಿದ ಘಟನೆ ಬಿಹಾರ ಪೊಲೀಸ್ ಇಲಾಖೆಯಲ್ಲಿ ಆಘಾತವನ್ನುಂಟುಮಾಡಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page