Home News NASA Training ಪೂರ್ಣಗೊಳಿಸಿದ ಮೊದಲ ಭಾರತೀಯ ಮಹಿಳೆ: ದಂಗೆಟಿ ಜಾಹ್ನವಿ

NASA Training ಪೂರ್ಣಗೊಳಿಸಿದ ಮೊದಲ ಭಾರತೀಯ ಮಹಿಳೆ: ದಂಗೆಟಿ ಜಾಹ್ನವಿ

25
Dangeti Jahnavi

ಭಾರತದ ದಂಗೆಟಿ ಜಾಹ್ನವಿ ನಾಸಾದ ವಿಶಿಷ್ಟ ಬಾಹ್ಯಾಕಾಶ ತರಬೇತಿ (NASA training) ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಇದು ಭಾರತ ಮಹಿಳೆಯರ ಶಕ್ತಿ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಪ್ರಭಾವವನ್ನು ತೋರಿಸುತ್ತಿದೆ.

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲುವಿನ ಜಾಹ್ನವಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ಪದವೀಧರೆ. ಅವರು ನಾಸಾದ ಅಂತಾರಾಷ್ಟ್ರೀಯ ಏರ್ ಆಂಡ್ ಸ್ಪೇಸ್ ಕಾರ್ಯಕ್ರಮವನ್ನು ಪೂರೈಸಿದ್ದಾರೆ. 2029ರಲ್ಲಿ ಟೈಟಾನ್ ಆರ್ಬಿಟಲ್ ಪೋರ್ಟ್ ನಿಲ್ದಾಣಕ್ಕೆ ಬಾಹ್ಯಾಕಾಶ ಪ್ರಯಾಣ ಮಾಡಲಿದ್ದಾರೆ.

ವರ್ಷಗಳ ಕಠಿಣ ಪರಿಶ್ರಮದಿಂದ ಜಾಹ್ನವಿ ಈ ಯಶಸ್ಸನ್ನು ಗಳಿಸಿದ್ದಾರೆ. ಈ ಅಮೆರಿಕನ್ ಬಾಹ್ಯಾಕಾಶ ಯೋಜನೆ ಮುಂದಿನ ನಾಲ್ಕು ವರ್ಷಗಳಲ್ಲಿ ಆರಂಭವಾಗಲಿದ್ದು, ಜಾಹ್ನವಿ ಅದರ ಭಾಗಿಯಾಗಲಿದ್ದಾರೆ.

ಪಾಲಕೊಲ್ಲುವಿನಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಜಾಹ್ನವಿ, ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದಲ್ಲಿ ಪದವೀಧರರಾದರು. ಅವರ ಪೋಷಕರು ಶ್ರೀನಿವಾಸ್ ಮತ್ತು ಪದ್ಮಶ್ರೀ ಕುವೈತಿನಲ್ಲಿ ಉದ್ಯೋಗದಲ್ಲಿ ತೊಡಗಿದ್ದಾರೆ.

ಜಾಹ್ನವಿ ಇಸ್ರೋ ಸಂಸ್ಥೆಯ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ ಅನುಭವವಿದೆ. ನಿಟ್ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅವರು ಅನಲಾಗ್ ಗಗನಯಾನ, ಡೀಪ್ ಸೀ ಡೈವಿಂಗ್ ಮತ್ತು ಗ್ರಹ ವಿಜ್ಞಾನದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳು: ಅವರು ಪ್ಯಾನ್-ಸ್ಟಾರ್ಸ್ ಟೆಲಿಸ್ಕೋಪ್ ಡೇಟಾದ ಆಧಾರದಲ್ಲಿ ಕ್ಷುದ್ರಗ್ರಹವನ್ನು ಕಂಡುಹಿಡಿದ ಸಾಧನೆಯ ಜೊತೆಗೆ, ಅತ್ಯಂತ ಕಿರಿಯ ವಿದೇಶಿ ಅನಲಾಗ್ ಗಗನಯಾತ್ರೀ ಎಂಬ ಗೌರವವನ್ನೂ ಪಡೆದಿದ್ದಾರೆ. ಜೊತೆಗೆ ನಾಸಾ ಸ್ಪೇಸ್ ಅಪ್ಲಿಕೇಶನ್‌ ಚಾಲೆಂಜ್‌ನಲ್ಲಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿ, ಇಸ್ರೋ ಯಂಗ್ ಅಚೀವರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಗೌರವಗಳು ದೊರೆತಿವೆ.

ದಂಗೆಟಿ ಜಾಹ್ನವಿ ಸಾಧನೆ ಇದು ಮಹಿಳಾ ಶಕ್ತಿ, ಬಾಹ್ಯಾಕಾಶ ವಿಜ್ಞಾನ ಮತ್ತು ಭಾರತೀಯ ಯುವಶಕ್ತಿಯ ಪವಿತ್ರ ಸಂಕೇತವಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page