Mumbai: ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆ ಟೆಸ್ಲಾ ಕೊನೆಗೂ ಭಾರತಕ್ಕೆ ಕಾಲಿಟ್ಟಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ (Maharashtra Chief Minister Devendra Fadnavis) ಅವರು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಟೆಸ್ಲಾ ಶೋರೂಮ್ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು.
- ಮಾಡೆಲ್ ವೈ ಕಾರು ಬಿಡುಗಡೆ: ಹೊಸ ಎಲೆಕ್ಟ್ರಿಕ್ ಕಾರು ‘Model Y’ ಅನ್ನು ಟೆಸ್ಲಾ ಭಾರತದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಿಸ್ಟ್ ಮಾಡಿದೆ.
- ಶೋರೂಮ್ ಸ್ಥಳ: ಟೆಸ್ಲಾ ಶೋರೂಮ್ ಮುಂಬೈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆರಂಭವಾಗಿದೆ.
“ಎಲೆಕ್ಟ್ರಿಕ್ ವಾಹನಗಳ ವಿಸ್ತರಣೆಗೆ ಮಹಾರಾಷ್ಟ್ರದ ನೀತಿ ಉತ್ತಮವಾಗಿದೆ. ಟೆಸ್ಲಾ ನಮ್ಮ ರಾಜ್ಯವನ್ನು ಆರಿಸಿರುವುದು ಹೆಮ್ಮೆಬಡಿಸುತ್ತದೆ,” ಎಂದು ಸಿಎಂ ಹೇಳಿದರು.
ಚಾರ್ಜಿಂಗ್ ಸ್ಟೇಷನ್‌ಗಳು: ಟೆಸ್ಲಾ ಮುಂಬೈನಲ್ಲಿ 4 ದೊಡ್ಡ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಯೋಜಿಸಿದೆ.
ಟೆಸ್ಲಾ ಮಾಡೆಲ್ Y – ಬೆಲೆ ಮತ್ತು ಲಕ್ಷಣಗಳು
- ಬೆಲೆ
- ರಿಯರ್ ವ್ಹೀಲ್ ಡ್ರೈವ್ ಆನ್-ರೋಡ್ ಬೆಲೆ: ₹61.07 ಲಕ್ಷ
- ಲಾಂಗ್ ರೇಂಜ್ ಆನ್-ರೋಡ್ ಬೆಲೆ: ₹69.15 ಲಕ್ಷ
- ಫುಲ್ ಸೆಲ್ಫ್ ಡ್ರೈವ್ ಆಯ್ಕೆ: ₹6 ಲಕ್ಷ ಹೆಚ್ಚುವರಿ
- ಬ್ಯಾಟರಿ ಆಯ್ಕೆಗಳು
- 60 kWh – 500 ಕಿ.ಮೀ ರೇಂಜ್
- 75 kWh – 622 ಕಿ.ಮೀ ರೇಂಜ್
- ವೇಗ
- RWD ಮಾದರಿ: 0-100 ಕಿ.ಮೀ – 5.9 ಸೆಕೆಂಡು
- ಲಾಂಗ್ ರೇಂಜ್: 0-100 ಕಿ.ಮೀ – 5.6 ಸೆಕೆಂಡು
- ಭಾರತದಲ್ಲಿ Model Y ಬೆಲೆ ₹60 ಲಕ್ಷದಿಂದ ಪ್ರಾರಂಭವಾಗುತ್ತೆ, ಇದು ಅಮೆರಿಕ, ಚೀನಾ, ಜರ್ಮನಿ ಹೋಲಿದರೆ ಹೆಚ್ಚಿನ ದರ.
ಕಾರಿನ ವೈಶಿಷ್ಟ್ಯಗಳು
- 15.4-ಇಂಚಿನ ಟಚ್ ಸ್ಕ್ರೀನ್
- ಪವರ್ ಅಡ್ಜಸ್ಟಬಲ್ ಸೀಟ್‌ಗಳು
- ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್
- ಫಿಕ್ಸ್‌ಡ್ ಗ್ಲಾಸ್ ರೂಫ್
- 7 ಬಣ್ಣಗಳ ಆಯ್ಕೆ ಮತ್ತು 2 ಇಂಟೀರಿಯರ್ ಟ್ರಿಮ್
ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಈ ಹಿಂದೆ ಹೇಳಿರುವಂತೆ, ಟೆಸ್ಲಾ ತಾತ್ಕಾಲಿಕವಾಗಿ ಕೇವಲ ಶೋರೂಮ್ ತೆರೆಯುವದನ್ನೇ ಉದ್ದೇಶಿಸಿದೆ. ತಯಾರಿಕಾ ಘಟಕ ಸ್ಥಾಪನೆಗೆ ಸಂಬಂಧಿಸಿದ ನಿರ್ಧಾರವನ್ನು ಇನ್ನಷ್ಟೆ ತೆಗೆದುಕೊಳ್ಳಬೇಕಿದೆ.
ಟೆಸ್ಲಾ ಭಾರತದಲ್ಲಿ ತನ್ನ ಹೊಸ ಪ್ರಯಾಣವನ್ನು ಮುಂಬೈನಿಂದ ಆರಂಭಿಸಿದ್ದು, ಇದು ಎಲೆಕ್ಟ್ರಿಕ್ ಕಾರು ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ದಾರಿ ಮಾಡಿಕೊಡಲಿದೆ.