ಟಿ–20 ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಬೌಲರ್‌ಗಿಂತ ಬ್ಯಾಟರ್‌ಗಳಿಗೆ ಹೆಚ್ಚು ನೆರವು ಸಿಗುತ್ತೆ. ಆದರೆ ಐರ್ಲೆಂಡಿನ ಆಲ್ರೌಂಡರ್ ಕರ್ಟಿಸ್ ಕ್ಯಾಂಪರ್ (Curtis Camper) ತೀವ್ರ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಸತತ ಐದು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆದು ವಿಶ್ವದಾಖಲೆ ಸೃಷ್ಟಿಸಿದ್ದಾರೆ.
ಐರ್ಲೆಂಡ್‌ನ ದೇಶೀಯ ಟಿ–20 ಟೂರ್ನಿಯಲ್ಲಿ ಮನ್ಸ್ಟರ್ ರೆಡ್ಸ್ ತಂಡದ ಪರವಾಗಿ ನಾರ್ತ್ ವೆಸ್ಟ್ ವಾರಿಯರ್ಸ್ ವಿರುದ್ಧ ಕ್ಯಾಂಪರ್ ಆಟವಾಡುತ್ತಿದ್ದರು. ಅವರು 12ನೇ ಓವರ್‌ನಲ್ಲಿ ಎರಡು ವಿಕೆಟ್, ನಂತರ 14ನೇ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು, ಒಟ್ಟು ಐದು ಎಸೆತಗಳಲ್ಲಿ ಐದು ಆಟಗಾರರನ್ನು ಔಟ್ ಮಾಡಿದರು.
ಕ್ಯಾಂಪರ್ ಈ ಸಾಧನೆ ಮಾಡಿದ ವಿಶ್ವದ ಮೊದಲ ಪುರುಷ ಕ್ರಿಕೆಟ್ ಆಟಗಾರರಾಗಿದ್ದಾರೆ. ಈ ಹಿಂದೆ ಮಹಿಳಾ ಆಟಗಾರ್ತಿ, ಜಿಂಬಾಬ್ವೆಯ ಕೆಲಿಸ್ ಧುಲೋವ್, ಐದು ಎಸೆತಗಳಲ್ಲಿ ಐದು ವಿಕೆಟ್ ಪಡೆದಿದ್ದರು.
ಬೌಲಿಂಗ್ ಮಾತ್ರವಲ್ಲ, ಕ್ಯಾಂಪರ್ ಬ್ಯಾಟಿಂಗ್‌ನಲ್ಲೂ ಮಿಂಚಿದರು. ಅವರು 24 ಎಸೆತಗಳಲ್ಲಿ 44 ರನ್ ಗಳಿಸಿ ತಂಡವನ್ನು 188 ರನ್‌ಗೆ ತಲುಪಿಸಲು ನೆರವಾಗಿದರು. ಎದುರಿ ತಂಡ ಕೇವಲ 88 ರನ್‌ಗಳಿಗೆ ಆಲೌಟ್ ಆಯ್ತು. ಉತ್ತಮ ಆಟಕ್ಕಾಗಿ ಕ್ಯಾಂಪರ್‌ಗೆ ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿ ಲಭಿಸಿತು.