Bengaluru: ರಾಜ್ಯದಲ್ಲಿ ಅನರ್ಹರಿಗೆ ನೀಡಲಾಗಿರುವ ಬಿಪಿಎಲ್ (BPL) ಪಡಿತರ ಕಾರ್ಡುಗಳ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಹತ್ತಾರು ಎಕರೆ ಜಮೀನು, ಐಷಾರಾಮಿ ಕಾರು, ಬಂಗಲೆ ಹೊಂದಿರುವವರೂ ಸಹ ಬಿಪಿಎಲ್ ಕಾರ್ಡ್ ಪಡೆದು ರೇಷನ್ ಬಳಸುತ್ತಿರುವುದು ಪತ್ತೆಯಾಗಿದೆ. ನಿಜವಾಗಿಯೂ ಅಗತ್ಯವಿರುವ ಬಡ ಜನರಿಗೆ ಕಾರ್ಡ್ ಸಿಗದೆ ಹಿಂಸೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಸುಮಾರು 12 ಲಕ್ಷ ಕಾರ್ಡುಗಳನ್ನು ರದ್ದುಪಡಿಸಲು ಇಲಾಖೆ ಮುಂದಾಗಿದೆ.
ಅನರ್ಹ BPL card ಗಳ ಪಟ್ಟಿ
- ಮೃತಪಟ್ಟವರ ಹೆಸರಿನಲ್ಲಿ ಇನ್ನೂ ಕಾರ್ಡ್ ಇರುವವರು – 1,446
- ಅಂತರರಾಜ್ಯ ಕಾರ್ಡುದಾರರು – 57,864
- 25 ಲಕ್ಷ ರೂ. ಮೀರಿದ GST ವ್ಯವಹಾರ ನಡೆಸಿದವರು – 2,684
- ವಾರ್ಷಿಕ ಆದಾಯ ₹1.20 ಲಕ್ಷ ಮೀರಿದವರು – 5,13,613
- ಕಂಪನಿಗಳ ಡೈರೆಕ್ಟರ್ ಆಗಿರುವವರು – 19,690
- 7.5 ಎಕರೆಗೂ ಹೆಚ್ಚು ಜಮೀನು ಹೊಂದಿರುವವರು – 33,456
- ಇ-ಕೆವೈಸಿ ಮಾಡಿಸದವರು – 6,16,196
- ಕಳೆದ 6 ತಿಂಗಳಿಂದ ರೇಷನ್ ಪಡೆಯದವರು – 19,893
ಯಾರಿಗೆ BPL card ಸಿಗಬಾರದು
- ಸರ್ಕಾರಿ ನೌಕರರಿಗೆ
- ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಹೊಂದಿದ್ದವರಿಗೆ
- ನಗರದಲ್ಲಿ 1000 ಚದರ ಅಡಿ ಮೀರಿದ ಮನೆ/ಜಾಗ ಹೊಂದಿರುವವರಿಗೆ
- ನಾಲ್ಕು ಚಕ್ರದ ವಾಹನ ಹೊಂದಿರುವವರಿಗೆ
- ವಾರ್ಷಿಕ ಆದಾಯ ₹1.20 ಲಕ್ಷ ಮೀರಿದವರಿಗೆ
2021ರ ನೀತಿ ಆಯೋಗದ ವರದಿ ಪ್ರಕಾರ ರಾಜ್ಯದಲ್ಲಿ ಕೇವಲ 7.58% ಕುಟುಂಬಗಳು ಮಾತ್ರ ಬಡತನ ರೇಖೆಗಿಂತ ಕೆಳಗಿವೆ, ಆದರೆ ವಿತರಣೆ ಮಾಡಿರುವ ಕಾರ್ಡುಗಳು ಇದಕ್ಕಿಂತ ಬಹಳ ಹೆಚ್ಚಾಗಿದೆ. ಆದ್ದರಿಂದ ಅನುಮಾನಾಸ್ಪದ 12 ಲಕ್ಷ ಕಾರ್ಡುಗಳಲ್ಲಿ 8 ಲಕ್ಷಕ್ಕೂ ಹೆಚ್ಚು ರದ್ದು ಆಗುವ ಸಾಧ್ಯತೆ ಇದೆ.