ದಕ್ಷಿಣ ಕೊರಿಯಾದ (South Korea) ಮಾಜಿ ರಕ್ಷಣಾ ಸಚಿವ ಕಿಮ್ ಯೋಂಗ್-ಹ್ಯುನ್ (Defense Minister Kim Yong-hyun) ಪೊಲೀಸ್ ಕಸ್ಟಡಿಯಲ್ಲಿದ್ದಾಗ ಶೌಚಾಲಯದಲ್ಲಿ ತನ್ನ ಅಂಡರ್ವೇರ್ ಬಳಸಿ ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಪೊಲೀಸರು ಅದನ್ನು ತಡೆಯಲು ಯಶಸ್ವಿಯಾದರು.
ಕಿಮ್ ಯೋಂಗ್-ಹ್ಯುನ್ ಅವರನ್ನು ದಕ್ಷಿಣ ಕೊರಿಯಾದಲ್ಲಿ ಮಾರ್ಷಲ್ ಕಾನೂನು ಘೋಷಿಸಲು ಅಧ್ಯಕ್ಷ ಯೂನ್ ಸುಕ್ ಯೋಲ್‌ಗೆ ಸಲಹೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಕಾನೂನನ್ನು ಅನೇಕರು ಟೀಕಿಸುತ್ತಿದ್ದು, ಜನರಲ್ಲಿ ಆಕ್ರೋಶ ಉಂಟಾಗಿದೆ.
ಸಮರ ಕಾನೂನನ್ನು ಹೇರಿದರು. ಕೆಲವು ಗಂಟೆಗಳ ನಂತರ, ಸಂಸತ್ತಿನಲ್ಲಿ ಮತ ಚಲಾಯಿಸುವ ಮೂಲಕ ಸಂಸದರು ಅದನ್ನು ತೆಗೆದುಹಾಕಿದರು. ಇದರ ವಿರುದ್ಧ ಬಂಧನಕ್ಕೊಳಗಾಗಿದ್ದ ಮೊದಲ ವ್ಯಕ್ತಿ ಕಿಮ್. ಈ ಮೂಲಕ ಪೂರ್ವ ಏಷ್ಯಾ ದೇಶವನ್ನು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂಬ ಆರೋಪ ಅವರ ಮೇಲಿದೆ. ನ್ಯಾಯಾಲಯವು ಅವರ ವಿರುದ್ಧ ವಾರಂಟ್ ಹೊರಡಿಸಿತ್ತು.
ಮಾಜಿ ಸಚಿವ ಕಿಮ್ ಆತ್ಮಹತ್ಯೆಗೆ ಯತ್ನಿಸಿದ್ದು ಒತ್ತಡದಿಂದಾದ ನಿರ್ಧಾರವಾಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣ ದಕ್ಷಿಣ ಕೊರಿಯಾದಲ್ಲಿ ರಾಜಕೀಯ ಬಿಕ್ಕಟ್ಟನ್ನು ತೋರಿಸುತ್ತದೆ.
ಮಾರ್ಷಲ್ ಕಾನೂನು ತಾತ್ಕಾಲಿಕ ತುರ್ತು ಕಾನೂನಾಗಿದೆ, ಇದು ರಾಷ್ಟ್ರ ವಿರೋಧಿ ಶಕ್ತಿಗಳಿಗೆ ತಡೆಯಾಗಿ ವಿಧಿಸಲಾಗುತ್ತದೆ. ಆದರೆ, ದಕ್ಷಿಣ ಕೊರಿಯಾದ ಜನರು ಈ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಸರ್ಕಾರವನ್ನು ಹಿಂಪಡೆಯಲು ಬಲವಂತಪಡಿಸಿದ್ದಾರೆ.