Washington: ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ (Jimmy Carter) ಅವರು ಜಾರ್ಜಿಯಾದ ಪ್ಲೇನ್ಸ್‌ನಲ್ಲಿರುವ ಅವರ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು. ಕಾರ್ಟರ್ ಅವರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
1977ರಿಂದ 1981ರವರೆಗೆ ಅಮೆರಿಕದ 39ನೇ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ಅವರ ನಿಧನದ ಬಗ್ಗೆ ಕಾರ್ಟರ್ ಸೆಂಟರ್ ಮಾಹಿತಿ ನೀಡಿದೆ. ಅವರು ಭಾರತಕ್ಕೆ ಭೇಟಿ ನೀಡಿದ ಅಮೆರಿಕದ ಮೂರನೇ ಅಧ್ಯಕ್ಷರಾಗಿದ್ದವರು.
ಅವರ ಗೌರವಕ್ಕೆ, ಹರಿಯಾಣದ ಒಂದು ಗ್ರಾಮವನ್ನು ” ಕಾರ್ಟರ್‌ಪುರಿ ” ಎಂದು ಹೆಸರಿಸಲಾಗಿತ್ತು. 2002ರಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು.