Home Karnataka Koppal ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯುತ್ತಿದ್ದ ಆಟೋ ಪಲ್ಟಿ: 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯುತ್ತಿದ್ದ ಆಟೋ ಪಲ್ಟಿ: 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

198
gangavathi auto Rikshaw accident students injured

Gangavathi, Kopal : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾದ (Auto Rikshaw Accident) ಪರಿಣಾಮ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಗಂಗಾವತಿ ನಗರದ ಕನಕದಾಸ ವೃತ್ತದ ಬಳಿ ಸಂಭವಿಸಿದೆ.

ಗಂಗಾವತಿಯ ಲಯನ್ಸ್ ಶಾಲೆಯ ಸಂಜೀವ್, ಮುರ್ತುಜಾ ಬೇಗಂ, ನಿಹಾರಿಕಾ, ಸಾರಿಕಾ, ಭಾಗ್ಯಶ್ರೀ, ನಂದಿನಿ, ಸಹನಾ, ಅಶ್ವಿನಿ, ಅಭಯ್ ಮೊದಲಾದ ಮಕ್ಕಳಿಗೆ ಗಾಯಗಳಾಗಿದ್ದು ಈ ಪೈಕಿ ಇಬ್ಬರಿಗೆ ತಲೆ, ಬೆನ್ನು ಮತ್ತು ಮೂಳೆಯ ಭಾಗಕ್ಕೆ ಗಂಭೀರ ಗಾಯಗಳಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಸಂಭವಿಸುತ್ತಲೇ ಆಟೋ ಚಾಲಕ ನಾಪತ್ತೆಯಾಗಿದ್ದು, ಗಾಯಗೊಂಡ ಮಕ್ಕಳನ್ನು ಉಪವಿಭಾಗ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದಾರೆ. ಮೊಬೈಲ್​ನಲ್ಲಿ ಮಾತನಾಡುತ್ತಾ ಆಟೋ ಚಾಲನೆ ಮಾಡುತ್ತಿದ್ದ ವೇಳೆ, ರಸ್ತೆ ಮಧ್ಯೆ ಹಂಪ್​ ಬಂದ ಕಾರಣ ಸಡನ್ ಆಗಿ ಬ್ರೇಕ್ ಹಾಕಲು ಮುಂದಾದಾಗ ದುರಂತ ಸಂಭವಿಸಿದೆ ಎಂದು ಮಕ್ಕಳು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page