Home Karnataka Chikkaballapura ಲೋಡ್ ಶೆಡ್ಡಿಂಗ್‌ : ರೈತರ ಪ್ರತಿಭಟನೆ

ಲೋಡ್ ಶೆಡ್ಡಿಂಗ್‌ : ರೈತರ ಪ್ರತಿಭಟನೆ

92

Gauribidanur : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಬೆಸ್ಕಾಂ (Bescom) ಪಂಪ್‌ಸೆಟ್ ಗಳಿಗೆ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ (Load Shedding) ಮಾಡುತ್ತಿರುವ ವಿರುದ್ಧ ಗೌರಿಬಿದನೂರು ನಗರದಲ್ಲಿ ಸೋಮವಾರ ತಾಲ್ಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ರೈತರು (Farmers) ಟ್ರ್ಯಾಕ್ಟರ್‌ಗಳಲ್ಲಿ ಬೃಹತ್ ಪ್ರತಿಭಟನೆ (Protest) ನಡೆಸಿ, ರಾಜ್ಯ ಸರ್ಕಾರ ಮತ್ತು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ತಾಲ್ಲೂಕು ಪಂಚಾಯತಿ ಆವರಣದಲ್ಲಿ ಸೇರಿ ಅಲ್ಲಿಂದ ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಎನ್.ಸಿ.ನಾಗಯ್ಯರೆಡ್ಡಿ ವೃತ್ತದ ಮೂಲಕ ಎಂ.ಜಿ ರಸ್ತೆಯಲ್ಲಿ ಸಾಗಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಬೆಸ್ಕಾಂ ಎಇಇ ಪರಮೇಶ್ವರಯ್ಯ ಅವರಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ವಿ.ಲೋಕೇಶ್ ಗೌಡ “ಈ ಹಿಂದೆ ರಾತ್ರಿ ಪಾಳಯದಲ್ಲಿ 3, ಹಗಲಿನಲ್ಲಿ 4 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತಿತು. ಆದರೆ ಇತ್ತೀಚಿನ ಕೆಲ ದಿನಗಳಿಂದ ಅದನ್ನು ಕೇವಲ ಎರಡು ಗಂಟೆಗೆ ಇಳಿಸಿ, ರೈತರ ‌ಬದುಕಿಗೆ ಕೊಳ್ಳಿ ಹಿಡುತ್ತಿದೆ. ಇದರಿಂದಾಗಿ ಕೃಷಿ ಮತ್ತು ಹೈನುಗಾರಿಕೆ ನಂಬಿ ಬದುಕುತ್ತಿರುವ ರೈತರ ಬದುಕಿಗೆ ಕಂಟಕವಾಗಿದೆ” ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರಾಮಚಂದ್ರರೆಡ್ಡಿ,‌ ಮುದ್ದರಂಗಪ್ಪ, ರಾಮರೆಡ್ಡಿ, ಸುರೇಶ್ ಕುಮಾರ್, ನರಸಿಂಹಮೂರ್ತಿ, ಸನತ್ ಕುಮಾರ್, ಶ್ರೀನಿವಾಸ್, ವೆಂಕಟೇಶ್, ಪ್ರಭಾಕರ್, ಗೋವಿಂದಪ್ಪ, ಗೋಪಿ, ನಾರಾಯಣಪ್ಪ, ಶ್ರೀನಿವಾಸರೆಡ್ಡಿ, ಶಶಿಕುಮಾರ್, ಲಕ್ಷ್ಮಿಪತಿ ಮತ್ತಿತರರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

The post ಲೋಡ್ ಶೆಡ್ಡಿಂಗ್‌ : ರೈತರ ಪ್ರತಿಭಟನೆ appeared first on Chikkaballapur.

NO COMMENTS

LEAVE A REPLY

Please enter your comment!
Please enter your name here

You cannot copy content of this page