
Gauribidanur : ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯ ಮತ್ತು ನಗರಗೆರೆ ಹೋಬಳಿ ವ್ಯಾಪ್ತಿಯ ಬಿ.ಬೊಮ್ಮಸಂದ್ರ,ಡಿ.ಪಾಳ್ಯ,ಹುದುಗೂರು,ಮೇಳ್ಯಾ,ವಾಟದಹೊಸಹಳ್ಳಿ,ನಗರಗೆರೆ,ಜಿ.ಕೊತ್ತೂರು,ನಕ್ಕಲಹಳ್ಳಿ,ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಗ್ರಾಮಗಳಲ್ಲಿ ವಿವಿಧ ಇಲಾಖೆಯ ಅನುದಾನಗಳೊಂದಿಗೆ CC Road,ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ ಹಾಗೂ ಭೂಮಿ ಪೂಜೆಯನ್ನು (Bhoomi Pooje) ಶಾಸಕ ಕೆ.ಎಚ್ ಪುಟ್ಟಸ್ವಾಮಿ ಗೌಡ (KH Puttaswamy Gowda) ನೆರವೇರಿಸಿದರು.
“ಕಚ್ಚಾ ರಸ್ತೆ ಮುಕ್ತ ಗ್ರಾಮ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ರಸ್ತೆ ನಿರ್ಮಾಣ ಮಾಡುವುದು ನಮ್ಮ ಗುರಿ” ಎಂದು ಈ ಸಂದರ್ಭದಲ್ಲಿ ಶಾಸಕ ಕೆ.ಎಚ್ ಪುಟ್ಟಸ್ವಾಮಿ ಗೌಡ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕುಮಾರ್, ಮುಖಂಡ ಶ್ರೀನಿವಾಸ ಗೌಡ, ಕೆ.ನಂಜುಂಡಪ್ಪ, ಬಾಲಪ್ಪ, ಶಿವಶಂಕರ್, ಬೇಬಿ, ರಮೇಶ್, ಶ್ರೀಕಾಂತ್, ಗಂಗಾಧರಪ್ಪ, ಶಾಂತಮ್ಮ, ಹರೀಶ್ ರೆಡ್ಡಿ, ಜಯಸಿಂಹ ರೆಡ್ಡಿ, ಯೇಸು ನಾಗರಾಜ್, ಶ್ರೀನಿವಾಸ್, ಪಿಡಿಒ ವೆಂಕಟರಾಜು, ರಘುನಾಥ್ ಮೂರ್ತಿ, ವೆಂಕಟರೋಣಪ್ಪ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಕಚ್ಚಾ ರಸ್ತೆ ಮುಕ್ತ ಗ್ರಾಮ ನಿರ್ಮಾಣಕ್ಕೆ ಮೊದಲ ಆದ್ಯತೆ appeared first on Chikkaballapur | Chikballapur District | Chikkaballapura Latest Breaking Stories | ಚಿಕ್ಕಬಳ್ಳಾಪುರ ಸುದ್ದಿ.