back to top
25.1 C
Bengaluru
Thursday, November 7, 2024
HomeKarnatakaChikkaballapuraCongress ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ

Congress ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ

- Advertisement -
- Advertisement -

Gauribidanur : ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿಯಲ್ಲಿ ಭಾನುವಾರ Congress ಪಕ್ಷದ ಸದಸ್ಯತ್ವ ನೋಂದಣಿ (Membership Registration) ಅಭಿಯಾನ ಹಾಗೂ ಕಾರ್ಯಕರ್ತರ ಸಭೆ ನಡೆಯಿತು. ಕಾರ್ಯಕ್ರಮಕ್ಕೆ ಶಾಸಕ ಎನ್‌.ಎಚ್.ಶಿವಶಂಕರರೆಡ್ಡಿ (N. H. Shivashakara Reddy) ಹಾಗೂ ಮುಖಂಡರು ಚಾಲನೆ ನೀಡಿದರು.

ಸಭೆಯಲ್ಲಿ ಮಾತಾನಾಡಿದ ಶಾಸಕ ಎನ್‌.ಎಚ್.ಶಿವಶಂಕರರೆಡ್ಡಿ “130 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ಸದಸ್ಯತ್ವ ಪಡೆಯುವುದೇ ಒಂದು ಅದೃಷ್ಟ. ಗ್ರಾಮೀಣ ಭಾಗದ ಯುವಕರಿಗೆ ಭವಿಷ್ಯ ನೀಡುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡಿದ್ದು ಯುವಕರಿಗೆ ಉದ್ಯೋಗದ ಅವಕಾಶ ಕಲ್ಪಿಸುವುದಕ್ಕಾಗಿ ಕ್ಷೇತ್ರದ ಕುಡುಮಲಕುಂಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ನಿರ್ಮಾಣ ಮಾಡಿ ಸಾಕಷ್ಟು ಉದ್ಯೋಗದ ಅವಕಾಶಗಳನ್ನು ಕಲ್ಪಿಸಿದೆ. ಬಿಜೆಪಿಯ ಭ್ರಷ್ಟ ಆಡಳಿತದಿಂದಾಗಿ ಇಡೀ ರಾಷ್ಟ್ರದ ಆರ್ಥಿಕ ಸ್ಥಿತಿಗತಿಗಳು ಸಂಕಷ್ಟಕ್ಕೆ ಈಡಾಗಿದೆ. ಎತ್ತಿನ ಹೊಳೆ ಯೋಜನೆಯು ಸ್ಥಗಿತಗೊಂಡು ಬೃಹತ್ ನೀರಾವರಿ ಯೋಜನೆಗೆ ಗ್ರಹಣ ಹಿಡಿದಿದೆ. ಬೂತ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಪಕ್ಷವನ್ನು ಸದೃಢಗೊಳಿಸಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲ ಕಾರ್ಯಕರ್ತರ ಮೇಲಿದೆ ” ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ.ಎನ್‌.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರಾದ ಬಿ.ಪಿ‌.ಅಶ್ವತ್ಥನಾರಾಯಣಗೌಡ, ಬ್ಲಾಕ್ ಕಾಂಗ್ರೆಸ್ ‌ನಗರ ಘಟಕದ ಅಧ್ಯಕ್ಷರಾದ ವೇದಲವೇಣಿ ಎನ್‌.ವೇಣು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮರಳೂರು ಹನುಮಂತರೆಡ್ಡಿ, ಮುಖಂಡರಾದ ಆರ್.ಲೋಕೇಶ್, ಚಿಕ್ಕಣ್ಣ, ಎಂ.ಡಿ.ನರಸಿಂಹಮೂರ್ತಿ, ಶ್ರೀನಿವಾಸ್, ಬೊಮ್ಮಣ್ಣ, ಎಚ್.ಎನ್.ಪ್ರಕಾಶ್ ರೆಡ್ಡಿ, ಕಲೀಂ ಉಲ್ಲಾ, ಮುಮ್ತಾಜ್ ಅಲೀ, ನಾನಾ ಅಬ್ಬಾಸ್, ಬಿ.ಆರ್.ಮಹದೇವ್, ನವೀನ್ ಯಾದವ್, ರವಿ, ತಾರಾನಾಥ್, ಕೆ.ವಿ.ಶ್ರೀನಿವಾಸ್, ಶಾರೀಕ್ ಅಲೀ, ಗಿರೀಶ್ ರೆಡ್ಡಿ, ಹರ್ಷರೆಡ್ಡಿ, ಸುಮನ, ಎ.ಅರುಂಧತಿ, ರೇಣುಕಮ್ಮ, ಸವಿತಮ್ಮ, ಕೃಷ್ಣಕುಮಾರಿ, ದೀಪಕ್, ಮಾಬೂ, ನಾನಾ ಅಬ್ಬಾಸ್, ಹಾಲಗಾನಹಳ್ಳಿ ನವೀನ್, ಇಡಗೂರು ಸೋಮಣ್ಣ ಭಾಗವಹಿಸಿದ್ದರು.

 

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

You cannot copy content of this page