
Gauribidanur : ಗೌರಿಬಿದನೂರು ನಗರದ ಅಂಬೇಡ್ಕರ್ ವೃತ್ತದಲ್ಲಿ, ದಲಿತ ಸಂಘಟನೆಗಳ ಒಕ್ಕೂಟದಿಂದ (Dalit organizations) ಒಳ ಮೀಸಲಾತಿ ಪಡೆಯುವಂತೆ ಆಗ್ರಹಿಸಿ, ‘ಒಳ ಮೀಸಲಾತಿ ಜಾರಿಮಾಡಿ, ಇಲ್ಲವಾದರೆ ಕುರ್ಚಿ ಖಾಲಿ ಮಾಡಿ’ ಎಂಬ ಘೋಷಣೆಯೊಂದಿಗೆ ಬುಧವಾರ ‘ಬೆಂಗಳೂರು ಚಲೋ’ (Bengaluru Chalo) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಚೆನ್ನಪ್ಪ ಮಾತನಾಡಿ, “ಕಳೆದ ವರ್ಷ ಸುಪ್ರೀಂ ಕೋರ್ಟ್ ಮಾದಿಗ ಜನಾಂಗದವರಿಗೆ ವಿವಿಧ ರಾಜ್ಯಗಳು ಮೀಸಲಾತಿ ನೀಡಬಹುದು ಎಂದು ತೀರ್ಮಾನ ನೀಡಿತು. ಈಗಾಗಲೇ ಅಂಧ್ರಪ್ರದೇಶದಲ್ಲಿ ಒಳ ಮೀಸಲಾತಿ ಜಾರಿಯಾಗಿದ್ದು ನಮ್ಮ ರಾಜ್ಯ ಸರ್ಕಾರ ಜಾರಿಗೊಳಿಸಲು(Siddaramaiah government) ವಿಳಂಭ ಮಾಡುತ್ತಿದೆ. ಇದು ಖಂಡನೀಯವಾಗಿದ್ದು ಈ ಸರ್ಕಾರ ದಲಿತ ವಿರೋಧಿ ಮತ್ತು ಮಾದಿಗ ಜನಾಂಗದ ಏಳಿಗೆಗೆ ಅಡ್ಡಿಯಾಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ನಮ್ಮ ಬೆಂಬಲ ಇರದೇ ಹೋಗುವುದು” ಎಂದು ತಿಳಿಸಿದರು.
ದುವಾರಾ ದಲಿತ ಮುಖಂಡ ನರಸಿಂಹಮೂರ್ತಿ, ಬಾಲಪ್ಪ, ಲಕ್ಷ್ಮಿನಾರಾಯಣ, ನಾರಾಯಣಪ್ಪ, ಸುರ್ದಶನ್, ಮುನಿಯಪ್ಪ, ಕಾರ್ಮಿಕ ಘಟಕದ ಉಪಾಧ್ಯಕ್ಷ ವೆಂಕಟೇಶ್, ನಾಗರಾಜ್ ಎನ್. ಗಂಗಾಧರಯ್ಯ ವಕೀಲ ನಾಗರಾಜ್, ಹಾಲಗಾನಹಳ್ಳಿ ಗಂಗಾಧರಪ್ಪ, ಹುಲಿಕುಂಟೆ ಅಶ್ವತ್ಥಪ್ಪ ಮತ್ತು ಕಿರಣ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
The post ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ‘ಬೆಂಗಳೂರು ಚಲೋ’ ಕಾರ್ಯಕ್ರಮ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.