Gauribidanur : ಹೊಸೂರಿನ ಎಚ್.ನರಸಿಂಹಯ್ಯ ನ್ಯಾಷನಲ್ ಹೈಸ್ಕೂಲ್‍ನಲ್ಲಿ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ (Dr H Narasimhaiah) ಅವರ ಪುಣ್ಯಸ್ಮರಣೆಯ (Remembrance) ಪ್ರಯುಕ್ತ ವಿವಿಧ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ “ಎಚ್.ನರಸಿಂಹಯ್ಯ ವಿಜ್ಞಾನದ ಪ್ರಸಾರಕ್ಕೆ ನೀಡಿದಷ್ಟೇ ಒತ್ತು ವೈಚಾರಿಕ ಚಿಂತನೆಗೆ ನೀಡಿದ್ದರು. ಮೌಢ್ಯ ಮನುಷ್ಯನ ಬೌದ್ಧಿಕ ಬೆಳವಣಿಗೆಯನ್ನು ಮೊಟುಕುಗೊಳಿಸುತ್ತದೆ ಎಂದು ಭಾವಿಸಿದ್ದ ಅವರು ಪ್ರಶ್ನಿಸದೆ, ಪರೀಕ್ಷಿಸದೆ ಯಾವುದನ್ನೂ ಒಪ್ಪುತ್ತಿರಲಿಲ್ಲ. ಅವರ ಜೀವನದ ಇಂತಹ ಮಾರ್ಗ ನಮಗೆ ಆದರ್ಶವಾಗಬೇಕು” ಎಂದು ಹೇಳಿ ಎಚ್.ನರಸಿಂಹಯ್ಯರ ಹೆಸರಿನಲ್ಲಿ ಸ್ಥಾಪಿಸಿರುವ ವಸ್ತುಸಂಗ್ರಹಾಲಯಕ್ಕೆ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹ 5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಶಾಲಾ ವಾರ್ಷಿಕೋತ್ಸವದಲ್ಲಿ ಎನ್‍ಇಎಸ್ ಅಧ್ಯಕ್ಷ ಡಾ.ಎಚ್.ಎನ್.ಸುಬ್ರಹ್ಮಣ್ಯ, ಕಾರ್ಯದರ್ಶಿ ವಿ.ವೆಂಕಟಶಿವಾರೆಡ್ಡಿ, ಎಚ್.ವಿ.ವೆಂಕಟೇಶ್, ನಾಗಭೂಷಣಗುಪ್ತ, ವೆಂಕಟರಾಮರೆಡ್ಡಿ, ರಾಮ್‍ಮೋಹನ್, ವೆಂಕಟಸ್ವಾಮಿ, ನಾಗರಾಜಪ್ಪ, ಮುಖ್ಯ ಶಿಕ್ಷಕ ಕೆ.ನಾಗರಾಜ್, ಎಚ್.ಪಿ.ಸಿದ್ಧೇಶ್, ನರಸಿಂಹಮೂರ್ತಿ ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
The post ವಸ್ತುಸಂಗ್ರಹಾಲಯಕ್ಕೆ ₹ 5 ಲಕ್ಷ : ಶಾಸಕ appeared first on Chikkaballapur | ಚಿಕ್ಕಬಳ್ಳಾಪುರ.