Home Chikkaballapura Gauribidanur ಗೌರಿಬಿದನೂರು: ವಿಜೃಂಭಣೆಯಿಂದ ರಾಮಲಿಂಗೇಶ್ವರ ರಥೋತ್ಸವ ಆಚರಣೆ

ಗೌರಿಬಿದನೂರು: ವಿಜೃಂಭಣೆಯಿಂದ ರಾಮಲಿಂಗೇಶ್ವರ ರಥೋತ್ಸವ ಆಚರಣೆ

135

Gauribidanur : ಗೌರಿಬಿದನೂರಿನ ಹಿರೇಬಿದನೂರಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ರಾಮಲಿಂಗೇಶ್ವರ ರಥೋತ್ಸವ ಭಕ್ತಿಭಾವದಿಂದ ನೆರವೇರಿತು.

ಭಾನುವಾರ ಬೆಳಗ್ಗಿನಿಂದಲೇ ದೇವಾಲಯದಲ್ಲಿ ಕಳಶಪೂಜೆ, ಮಹಾರುದ್ರ ಹೋಮ, ರುದ್ರಾಭಿಷೇಕ, ಪುಷ್ಪ ಪಂಚಾಭಿಷೇಕ ಸೇರಿದಂತೆ ವಿಶೇಷ ಧಾರ್ಮಿಕ ವಿಧಿಗಳು ನಡೆದವು. ಮಹಿಳೆಯರು ದೇವರಿಗೆ ತಂಬಿಟ್ಟಿನ ಆರತಿಗಳನ್ನು ಬೆಳಗಿಸಿ ಭಕ್ತಿಯನ್ನು ಪ್ರದರ್ಶಿಸಿದರು.

ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು. ರಥಕ್ಕೆ ಬಾಳೆಹಣ್ಣು ಮತ್ತು ದವನವನ್ನು ಅರ್ಪಿಸುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಥೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡ ಭಕ್ತರು ದೇವರ ಆಶೀರ್ವಾದ ಪಡೆದುಕೊಂಡರು.

ಈ ವೇಳೆ ದೇವಾಲಯ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

For Daily Updates WhatsApp ‘HI’ to 7406303366

The post ಗೌರಿಬಿದನೂರು: ವಿಜೃಂಭಣೆಯಿಂದ ರಾಮಲಿಂಗೇಶ್ವರ ರಥೋತ್ಸವ ಆಚರಣೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.

NO COMMENTS

LEAVE A REPLY

Please enter your comment!
Please enter your name here

You cannot copy content of this page