
Gauribidanur : ಗೌರಿಬಿದನೂರು ಯುವ ಸಬಲೀಕರಣ, ಕ್ರೀಡಾ ಇಲಾಖೆ, ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಸಂಯುಕ್ತಾಶ್ರಯದಲ್ಲಿ ಗೌರಿಬಿದನೂರು ತಾಲ್ಲೂಕಿನ ಇಡಗೂರು (Idagur) ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟ (Grameena Kreeda Kootha) ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನದಿ ದಡ, ಹಗ್ಗ ಜಗ್ಗಾಟ, ಕೊಕ್ಕೊ, ಕಬಡ್ಡಿ, ಗೋಣಿಚೀಲ ಓಟ, ಮೂರು ಕಾಲಿನ ಓಟ, ಭತ್ತ ಕುಟ್ಟುವ ಸ್ಪರ್ಧೆ, ಮುಂತಾದ ಕ್ರೀಡೆಗಳು ನಡೆದವು. ಕ್ರೀಡಾಕೂಟದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮಪಂಚಾಯಿತಿ ಅಧ್ಯಕ್ಷೆ ಮಂಜುಳಾ ಭೀಮೇಶ್ “ಬಾಲ್ಯದ ಅವಿಭಾಜ್ಯ ಅಂಗವಾಗಿದ್ದ ಲಗೋರಿ, ಚಿನ್ನಿದಾಂಡು, ಮರಕೋತಿ ಆಟ, ಕಪ್ಪೆ ಓಟ, ಕುಂಟೆಬಿಲ್ಲೆ, ಹಗ್ಗ ಜಗ್ಗಾಟ, ಕಣ್ಣ ಮುಚ್ಚಾಲೆಯಂತಹ ದೇಶಿಯ ಪರಂಪರೆ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ಆಟಗಳನ್ನು ಆಯೋಜಿಸಿರುವುದು ಸಂತಸ ತಂದಿದೆ” ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗಮಣಿ ನಾಗರಾಜ್, ಸದಸ್ಯೆ ಪದ್ಮಾವತಿ, ಕ್ರೀಡಾ ಇಲಾಖೆಯ ಶ್ರೀಧರ್, ರಂಗಕರ್ಮಿ ನಾಗರಾಜ್, ಪ್ರಸನ್ನ ಕುಮಾರ್, ನಂಜುಂಡಪ್ಪ, ಮುದ್ದು, ಗಂಗಮ್ಮ, ಶಾಹಿದಾದಿ ಉಮಾಶಂಕರ್, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ, ಗೋಪಾಲ್, ನರಸಿಂಹಮೂರ್ತಿ, ಶ್ರೀನಿವಾಸ್, ಪ್ರಕಾಶ್, ಮೃತುಂಜಯ, ಚಿರಂಜೀವಿ, ವೈಟಿ ಪ್ರಸನ್ನ ಕುಮಾರ್ ಪಾಲ್ಗೊಂಡಿದ್ದರು.
The post ಗ್ರಾಮೀಣ ಕ್ರೀಡಾಕೂಟ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.