Gauribidanur : ಗೌರಿಬಿದನೂರು ತಾಲ್ಲೂಕಿನ ದಾರಿನಾಯಕನ ಪಾಳ್ಯದಲ್ಲಿ ಗುರುವಾರ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ರಥೋತ್ಸವ (Lakshmi Venkateshwara Rathotsava) ಅದ್ದೂರಿಯಾಗಿ ನಡೆಯಿತು. ರಾಜಗೋಪಾಲ್,ಶ್ರೀನಾಗ್, ಗೌತಮ್,ಶ್ರೀಕಾಂತ ಭಟ್ಟರ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯ ಜರುಗಿತು.
ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ತೇರನ್ನು ಊರಿನ ರಾಜ ಬೀದಿಗಳಲ್ಲಿ ಎಳೆದು ರಥಕ್ಕೆ ಹೂವು, ದವನ, ಬಾಳೇಹಣ್ಣನ್ನು ಸಮರ್ಪಿಸಿವರು.
ಶಾಸಕ ಪುಟ್ಟಸ್ವಾಮಿಗೌಡ, ಮಾಜಿ ಸಚಿವ ಶಿವಶಂಕರರೆಡ್ಡಿ, ರಾಘವೇಂದ್ರ ಹನುಮಾನ್, ಡಿ. ಪಾಳ್ಯ ವೆಂಕಟರಾಮರಾವ್,ರಾಜಸ್ವ ನಿರೀಕ್ಷಕರು ಲಕ್ಷ್ಮೀ ನರಸಪ್ಪ ರಥೋತ್ಸವ ಭಾಗಿಯಾಗಿದ್ದರು.
For Daily Updates WhatsApp ‘HI’ to 7406303366
The post ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ರಥೋತ್ಸವ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ.