Home Chikkaballapura Gauribidanur 29 ಕುರಿ, 2 ಮೇಕೆ ಕದ್ದ ಕಳ್ಳರ ಗ್ಯಾಂಗ್ ಬಂಧನ

29 ಕುರಿ, 2 ಮೇಕೆ ಕದ್ದ ಕಳ್ಳರ ಗ್ಯಾಂಗ್ ಬಂಧನ

157

Gauribidanur : ಮಂಚೇನಹಳ್ಳಿ ತಾಲ್ಲೂಕಿನ ಹೊನ್ನಪ್ಪನಹಳ್ಳಿ ಗ್ರಾಮದಲ್ಲಿ ಶೆಡ್‌ನಿಂದ 29 ಕುರಿಗಳು ಮತ್ತು 2 ಮೇಕೆಗಳನ್ನು ಕಳ್ಳತನ ಮಾಡಿದ್ದ ಐವರು ಆರೋಪಿಗಳ ಜಾಲವನ್ನು ಮಂಚೇನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿ ಬಂಧಿಸಿದ್ದಾರೆ.

ಡಿಸೆಂಬರ್ 2ರ ರಾತ್ರಿ ಹೊನ್ನಪ್ಪನಹಳ್ಳಿ ಗ್ರಾಮದ ನಂದೀಶ ಎಂಬುವರ ಶೆಡ್‌ನಲ್ಲಿದ್ದ ಕುರಿ ಮತ್ತು ಮೇಕೆಗಳನ್ನು ಕಳ್ಳರು ಕದ್ದೊಯ್ದಿದ್ದರು. ಈ ಸಂಬಂಧ ನಂದೀಶ ಅವರು ಪ್ರಕರಣ ದಾಖಲಿಸಿದ ನಂತರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು ಬೆಂಗಳೂರಿನ ಕೋಣನಕುಂಟೆ ಪ್ರದೇಶಕ್ಕೆ ಸೇರಿದವರಾಗಿದ್ದು, ಅವರಲ್ಲಿ ನಾಲ್ವರು ವಯಸ್ಕರು ಮತ್ತು ಒಬ್ಬ ಬಾಲಕ ಸೇರಿದ್ದಾನೆ.

  • ಯಶವಂತ್ (21)
  • ಸುನೀಲ್ (21)
  • ರಾಹುಲ್ (20)
  • ಮಂಜುನಾಥ್ (25)

ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕ

ಪೊಲೀಸರು ಬಂಧಿತರಿಂದ ಕಳ್ಳತನಕ್ಕೆ ಬಳಸಿದ್ದ ಸರಕು ಸಾಗಣೆ ವಾಹನ ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಂಚೇನಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

The post 29 ಕುರಿ, 2 ಮೇಕೆ ಕದ್ದ ಕಳ್ಳರ ಗ್ಯಾಂಗ್ ಬಂಧನ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.

NO COMMENTS

LEAVE A REPLY

Please enter your comment!
Please enter your name here

You cannot copy content of this page