
Gauribidanur : ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಕದಿರದೇವರಹಳ್ಳಿಯಲ್ಲಿ ಶನಿವಾರ ನೂತನ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ (New Anganwadi Building Foundation) ಭೂಮಿಪೂಜೆ ನೆರೆವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ “ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಒದಗಿಸಿದಲ್ಲಿ ಮಕ್ಕಳ ಕಲಿಕೆಗೆ ಮತ್ತು ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಲಿದ್ದು ಕ್ಷೇತ್ರದಲ್ಲಿ ಸುಮಾರು 10ಕ್ಕೂ ಹೆಚ್ಚು ನೂತನ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಟ್ಟಡವನ್ನು ಮುಂದಿನ 3-4 ತಿಂಗಳಿನಲ್ಲಿ ಪೂರ್ಣಗೊಳಿಸಿ ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಡಬೇಕಾಗಿದೆ” ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು, ಸಿಡಿಪಿಒ ಕೆ.ರವಿ, ಪಿಆರ್‌ಇಡಿ ಎಇಇ ರಘುನಾಥಮೂರ್ತಿ, ಪಿಡಿಒ ಬಸವರಾಜ್ ವೀರಪ್ಪ ಬಳೂಟಗಿ, ಕಾಮಾಕ್ಷಿ, ಪಿ.ಎನ್.ಶಿವಶಂಕರರೆಡ್ಡಿ, ಆರ್.ಎನ್.ವೆಂಕಟೇಶ್ ರೆಡ್ಡಿ, ಸಂಜೀವರಾಯಪ್ಪ, ಉಮಾದೇವಿ, ಜಯಚಂದ್ರರೆಡ್ಡಿ, ಸರಸ್ವತಿ, ಗೋಪಿ, ಶಂಕರರೆಡ್ಡಿ, ನರೇಶ್, ನರಸರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
The post ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ appeared first on Chikkaballapur.