Home Karnataka Chikkaballapura ಸರ್ಕಾರಿ ಕೆಲಸ ಆಗದೆ ಇದ್ದಾಗ ನನ್ನನ್ನು ನೇರವಾಗಿ ಸಂಪರ್ಕಿಸಿ : ಶಾಸಕರು

ಸರ್ಕಾರಿ ಕೆಲಸ ಆಗದೆ ಇದ್ದಾಗ ನನ್ನನ್ನು ನೇರವಾಗಿ ಸಂಪರ್ಕಿಸಿ : ಶಾಸಕರು

Gauribidanur : ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ತರಿದಾಳು ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಪಿಂಚಣಿ ಅದಾಲತ್ (Pension Adalat) ಮತ್ತು ಕುಂದು-ಕೊರತೆ ಸಭೆ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ” ಹಳ್ಳಿಗಳ ಪ್ರಗತಿಯಿಂದ ದೇಶ ಅಭಿವೃದ್ಧಿ ಆಗುತ್ತದೆ. ಅಧಿಕಾರಿಗಳು ಕಚೇರಿಯಲ್ಲಿ ಕೂರದೆ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಿದಲ್ಲಿ ಮಾತ್ರ ಅಲ್ಲಿನ ಸಮಸ್ಯೆಗಳ ಅರಿವಾಗುತ್ತದೆ. ಪ್ರತಿಯೊಬ್ಬ ಅಧಿಕಾರಿ ಸಮಾಜದ ಕಟ್ಟಕಡೆ ವ್ಯಕ್ತಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಿದಾಗ ಮಾತ್ರ ಯೋಜನೆ ಸಾರ್ಥಕವಾಗುತ್ತದೆ. ಯಾವುದೇ ಕಾರಣಕ್ಕೂ ಜನಸಾಮಾನ್ಯರು ಮಧ್ಯವರ್ತಿಗಳ ಬಳಿ ಹೋಗದೆ ನಿಮ್ಮ ಸಮೀಪದ ಪಂಚಾಯಿತಿಗೆ ನೇರವಾಗಿ ಭೇಟಿ ನೀಡಿ. ಅಲ್ಲಿ ಕೆಲಸ ಆಗದೆ ಇದ್ದಾಗ ನನ್ನ ಮತ್ತು ತಹಶೀಲ್ದಾರ್ ಅವರನ್ನು ನೇರವಾಗಿ ಸಂಪರ್ಕಿಸಿ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹೇಶ್ ಎಸ್.ಪತ್ರಿ, ಕಂದಾಯ ನಿರೀಕ್ಷಕರಾದ ಜೈಪ್ರಕಾಶ್, ಪಿಎಸ್‌ಐ ಇ.ಮೂರ್ತಿ, ನರೇಗಾ ಎಡಿ ಕರಿಯಪ್ಪ, ಲೋಕೋಪಯೋಗಿ ಇಲಾಖೆಯ ಎಇಇ ಪ್ರಕಾಶ್, ರೇಷ್ಮೆ ಇಲಾಖೆಯ ಕೆಂಚಮಲ್ಲಯ್ಯ, ಕಂದಾಯ ಇಲಾಖೆಯ ನರೇಂದ್ರ ಕುಮಾರ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

The post ಸರ್ಕಾರಿ ಕೆಲಸ ಆಗದೆ ಇದ್ದಾಗ ನನ್ನನ್ನು ನೇರವಾಗಿ ಸಂಪರ್ಕಿಸಿ : ಶಾಸಕರು appeared first on Chikkaballapur.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version