Gauribidanur : ಗೌರಿಬಿದನೂರು ನಗರದಲ್ಲಿ ಮಂಗಳವಾರ ನಗರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆ (PouraKarmikas Day) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ “ನಿತ್ಯ ನಗರದ ಜನತೆಯ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೌರಕಾರ್ಮಿಕರ ಕಾರ್ಯ ನಿಜಕ್ಕೂ ಶ್ಲಾಘನೀಯ, ಅಧಿಕಾರಿಗಳು ಸರ್ಕಾರದಿಂದ ಪೌರಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ತಲುಪಿಸುವ ಮೂಲಕ ಅವರ ಹಿತ ಕಾಪಾಡಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತೆ ಡಿ.ಎಂ.ಗೀತಾ, ತಹಶೀಲ್ದಾರ್ ಮಹೇಶ್.ಎಸ್.ಪತ್ರಿ, ತಾ.ಪಂ ಇಒ ಆರ್.ಹರೀಶ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ಎನ್.ವಿ.ಶಿವಣ್ಣ, ನಗರಸಭೆ ಸದಸ್ಯರಾದ ವಿ.ರಮೇಶ್, ಎ. ಮೋಹನ್, ಎಸ್.ರೂಪಾ, ಕೆ.ಎಂ.ಗಾಯತ್ರಿ ಬಸವರಾಜ್, ಪದ್ಮಾವತಮ್ಮ, ಆರ್.ಪಿ.ಗೋಪಿನಾಥ್, ರಾಜಕುಮಾರ್, ಲಕ್ಷ್ಮಿನಾರಾಯಣಪ್ಪ, ಡಿ.ಎನ್.ವೆಂಕಟರೆಡ್ಡಿ, ಮುಖಂಡರಾದ ಅಲ್ತಾಪ್, ಅಬುಬೇಕರ್ ಮತ್ತಿತರರು ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
The post ಪೌರಕಾರ್ಮಿಕರ ಕಾರ್ಯ ನಿಜಕ್ಕೂ ಶ್ಲಾಘನೀಯ : ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ appeared first on Chikkaballapur.