Home Karnataka Chikkaballapura ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ

ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ

Gauribidanur : ಸಮಾಜಮುಖಿ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬುಧವಾರ ಸಂಸದ ಅನಂತ ಕುಮಾರ್ ಹೆಗಡೆ (Anantkumar Hegde) ವಿರುದ್ಧ ಗೌರಿಬಿದನೂರಿನಲ್ಲಿ ಪ್ರತಿಭಟಿಸಿ (protest) ತಾಲ್ಲೂಕು ಆಡಳಿತದ ಮೂಲಕ ರಾಜ್ಯಪಾಲರಿಗೆ (Governor)ಮನವಿ ಸಲ್ಲಿಸಿದರು.

ಗೌರಿಬಿದನೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಅನಂತಕುಮಾರ್ ಹೆಗಡೆ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ಪದೇ ಪದೇ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುವ ಮೂಲಕ ಬೇಜವಾಬ್ದಾರಿ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಮನುವಾದ ಪ್ರತಿಪಾದಕರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿ ಗ್ರೇಡ್-2 ತಹಶೀಲ್ದಾರ್ ಆಶಾ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕೆ.ನಂಜುಂಡಪ್ಪ, ಹುಲಿಕುಂಟೆ ಅಶ್ವತ್ಥಪ್ಪ, ಆನೂಡಿ ನಾಗರಾಜ್, ಪಿ.ನರಸಿಂಹಮೂರ್ತಿ, ಸಿ.ಜಿ.ಗಂಗಪ್ಪ, ಸಿದ್ಧ ಗಂಗಪ್ಪ, ಕೆ.ವಿ.ನಾಯಕ, ನಾಗರಾಜಪ್ಪ, ಟಿ.ನಂಜುಂಡಪ್ಪ, ಶ್ರೀನಿವಾಸ, ಲಕ್ಷ್ಮಿನರಸಯ್ಯ, ಜಿ.ಲಕ್ಷ್ಮಿನಾರಾಯಣ, ರಾಜಪ್ಪ, ಬಿ.ಕೆ.ನರಸಿಂಹಮೂರ್ತಿ, ಜಿ.ಸೋಮಯ್ಯ, ಎಂ.ಕೆ.ರಾಮಚಂದ್ರ, ವೈ.ಟಿ.ಪ್ರಸನ್ನ, ಜೆ.ಎನ್.ಆದಿನಾರಾಯಣಪ್ಪ, ನಾರಾಯಣಸ್ವಾಮಿ, ಬಾಲಪ್ಪ, ತಿಪ್ಪಯ್ಯ ಮತ್ತಿತರರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

The post ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ appeared first on Chikkaballapur | ಚಿಕ್ಕಬಳ್ಳಾಪುರ.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version