
Gauribidanur : ಗೌರಿಬಿದನೂರು ತಾಲ್ಲೂಕಿನ ಮಾದನಹಳ್ಳಿ ಕೆರೆ ಅಂಗಳದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಿರ್ಮಿಸಲಾದ ಕುಂಬಾರ ಸಮುದಾಯ ಭವನ, ವಿಶ್ವಕರ್ಮ ಸಮುದಾಯ ಭವನ, ಮರಾಠ ಸಮುದಾಯ ಭವನ, ಸವಿತ ಸಮಾಜದ ಸಮುದಾಯ ಭವನ, ಮಡಿವಾಳ ಸಮುದಾಯದ ಭವನ (Samudhaya Bhavana) ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು (Girls Hostel) ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ (KH Puttaswamy Gowda) ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪುಟ್ಟಸ್ವಾಮಿ ಗೌಡ “ಸರ್ಕಾರವು ಹಿಂದಿನಿಂದಲೂ ಅಶಕ್ತ ಸಮುದಾಯಗಳಿಗೆ ರಾಜಕೀಯ ಮತ್ತು ಆರ್ಥಿಕ ಶಕ್ತಿಯಾಗಿ ನಿಂತಿದೆ. ಧ್ವನಿ ಇಲ್ಲದ ತಳ ಸಮುದಾಯಗಳ ಸಣ್ಣಪುಟ್ಟ ಸಮಾರಂಭಗಳನ್ನು ನಡೆಸಲು ಈ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಶೈಕ್ಷಣಿಕ ಅಭಿವೃದ್ಧಿಗಾಗಿ ಸುಸಜ್ಜಿತವಾದ ವಿದ್ಯಾರ್ಥಿ ನಿಲಯವನ್ನೂ ನಿರ್ಮಿಸಲಾಗಿದ್ದು ಪ್ರತಿಯೊಬ್ಬರೂ ಈ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಂಬಾರ, ವಿಶ್ವಕರ್ಮ, ಸವಿತ ಸಮಾಜ, ಮಡಿವಾಳ ಸಮುದಾಯದ ಮುಖಂಡರು ಭಾಗಿಯಾಗಿದ್ದರು.
For Daily Updates WhatsApp ‘HI’ to 7406303366
The post ವಿವಿಧ ಸಮುದಾಯ ಭವನಗಳ ಉದ್ಘಾಟನೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.