
Gauribidanur : ಗೌರಿಬಿದನೂರು ನಗರದ ಬಿ.ಎಚ್. ರಸ್ತೆಯಲ್ಲಿ ಮಂಗಳವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಪಾದರಕ್ಷೆ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಉತ್ತಿಕೊಂಡಿದೆ (Slipper Shop Fire Accident) .
ಅಂಗಡಿ ಮಾಲೀಕ ಬಾಬಾ ಜಾನ್ ಬಂದ್ ಮಾಡಿ ಮನೆಗೆ ತೆರಳಿದ್ದರು. ಪಕ್ಕದ ಅಂಗಡಿಯವರು ಬೆಂಕಿ ಹೊತ್ತಿಕೊಂಡಿರುವ ವಿಚಾರ ತಿಳಿಸಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಹೊತ್ತಿಗೆ ಅಂಗಡಿಯಲ್ಲಿನ ಸರಕು ಮತ್ತು ಮೇಲ್ಭಾಗದ ಗೋದಾಮಿನಲ್ಲಿದ್ದ ಸರಕು ಸಹ ಸುಟ್ಟು ಬೂದಿಯಾಗಿದ್ದು ಸುಮಾರು ₹15 ಲಕ್ಷ ಸರಕು ನಷ್ಟವಾಗಿದೆ ಎಂದು ತಿಳಿಸಲಾಗಿದೆ.
ಈ ಅವಘಡ ಶಾರ್ಟ್‌ಸರ್ಕಿಟ್‌ನಿಂದ ಸಂಭವಿಸಿದೆ ಎನ್ನಲಾಗಿದೆ.
For Daily Updates WhatsApp ‘HI’ to 7406303366
The post ಪಾದರಕ್ಷೆ ಮಳಿಗೆಯಲ್ಲಿ ಅಗ್ನಿ ಅವಘಡ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.