Search
WhatsApp alerts

Home › Gauribidanur

ಲಾಂಗ್ ಬಳಸಿ ಕೇಕ್ ಕತ್ತರಿಸಿದ ಯುವಕನ ಬಂಧನ

administrator · Published

Gauribidanur : ಹುಟ್ಟುಹಬ್ಬದ ಆಚರಣೆಯಲ್ಲಿ ಲಾಂಗ್ ಬಳಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಗೌರಿಬಿದನೂರು ತಾಲೂಕಿನ ವೈಚಕೂರಹಳ್ಳಿ ಗ್ರಾಮದ ಯುವಕನೊಬ್ಬನನ್ನು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತನು ಅನಿಲ್ ಕುಮಾರ್ (24) ಎಂಬ ಆಟೊ ಚಾಲಕ. ತನ್ನ 24ನೇ ಹುಟ್ಟುಹಬ್ಬದ ಪ್ರಯುಕ್ತ ಲಾಂಗ್ ಹಿಡಿದು ಕೇಕ್ ಕತ್ತರಿಸಿದ ವಿಡಿಯೊ ಮತ್ತು ಫೋಟೋಗಳನ್ನು ಸ್ನೇಹಿತರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಸ್ಥಳೀಯ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅನಿಲ್ ಕುಮಾರ್‌ನನ್ನು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಹಿಂಸಾತ್ಮಕ ಭಾವ ವ್ಯಕ್ತಪಡಿಸುವ ಘಟನೆಯು ಯುವಕರಲ್ಲಿ ತಪ್ಪು ಸಂದೇಶ ಹರಡುವ ಅಪಾಯವಿರುವ ಹಿನ್ನೆಲೆಯಲ್ಲಿ, ಪೊಲೀಸರು ಅಂತಹ ಕೆಲಸಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿದ್ದಾರೆ.

For Daily Updates WhatsApp ‘HI’ to 7406303366

The post ಲಾಂಗ್ ಬಳಸಿ ಕೇಕ್ ಕತ್ತರಿಸಿದ ಯುವಕನ ಬಂಧನ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.

Read next

ಪೌರಕಾರ್ಮಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮ ಮುಂದೂಡಿಕೆ

ಅಧಿಕ ಭಾರ, ಅತಿವೇಗ ಮತ್ತು ಅಕ್ರಮ ಗಣಿಗಾರಿಕೆಗೆ ಬ್ರೇಕ್: ಎರಡು ವಿಶೇಷ ತಂಡ ರಚನೆ

ಜೀತ ಪದ್ಧತಿ ಸಂತ್ರಸ್ತೆಗೆ ₹7 ಲಕ್ಷ ಪರಿಹಾರ: ಜೀತ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ ಎಂದ ನ್ಯಾಯಾಧೀಶರು

ಪೌರಕಾರ್ಮಿಕರೊಂದಿಗೆ ನೇರ ಸಂವಾದ: ನವೆಂಬರ್ 18ರಂದು ಸಫಾಯಿ ಕರ್ಮಚಾರಿ ಆಯೋಗದ ಭೇಟಿ

You cannot copy content of this page