Ramanagara : ಜರ್ಮನಿಯ ನಿಯೋಗವು (German Delegation) ಶನಿವಾರ ರಾಮನಗರ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ (Government Silk Cocoon Market) ಭೇಟಿ ನೀಡಿ ಇಲ್ಲಿನ ವ್ಯವಸ್ಥೆ ಹಾಗೂ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ಪಡೆಯಿತು.
ಕೇಂದ್ರ ರೇಷ್ಮೆ ಮಂಡಳಿಯ ಹಿರೇಮಠ್ ರವರ ಜೊತೆ ಬಂದ ಜರ್ಮನಿಯ ವ್ಯಕ್ತಿಗಳಿಗೆ ಮಾರುಕಟ್ಟೆಗೆ ಯಾವ ಪ್ರಮಾಣದಲ್ಲಿ ಗೂಡು ಬರುತ್ತದೆ ಅದನ್ನು ಹೇಗೆ ಹರಾಜು ಮಾಡಿ ಸಾಗಿಸಲಾಗುತ್ತದೆ ಎಂಬುದರ ಕುರಿತು ವಿವರಿಸಲಾಯಿತು. ಹಬ್ಬದ ನಡುವೆಯೂ ಶನಿವಾರ ಹಾಗೂ ಭಾನುವಾರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಗೂಡು ಆವಕವಾಗಿತ್ತು ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.