Home Business IT sector ನಲ್ಲಿ ಒಳ್ಳೆಯ ಉದ್ಯೋಗಾವಕಾಶ

IT sector ನಲ್ಲಿ ಒಳ್ಳೆಯ ಉದ್ಯೋಗಾವಕಾಶ

job opportunities to increase in IT Sector

New Delhi: ಈ ಹಣಕಾಸು ವರ್ಷದಲ್ಲಿಸಾಫ್ಟ್​ವೇರ್ ಎಂಜಿನಿಯರುಗಳಿಗೆ (Software engineer) ಹೆಚ್ಚು ಉದ್ಯೋಗಾವಕಾಶ ಸಿಗಲಿದೆ. ಕಳೆದ ವರ್ಷ ಹೊಸ ನೇಮಕಾತಿಯನ್ನು ಅಳೆದು ತೂಗಿ ಮಾಡುತ್ತಿದ್ದ ಐಟಿ ಸೆಕ್ಟರ್​ನ (IT sector) ಕಂಪನಿಗಳು ಈ ವರ್ಷ ಹೆಚ್ಚು ಮುಕ್ತವಾಗಿ ಮಾಡಲಿವೆ.

2024-25ರ ಹಣಕಾಸು ವರ್ಷದಲ್ಲಿ ಈ ವಲಯದಲ್ಲಿ ಹೊಸ ನೇಮಕಾತಿಯಲ್ಲಿ ಶೇ. 20 ರಿಂದ 25ರಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ ಎಂದು ಟೀಮ್​ಲೀಸ್ ಡಿಜಿಟಲ್ (Teamless Digital) ಸಂಸ್ಥೆಯ ವರದಿಯೊಂದು ಹೇಳುತ್ತಿದೆ.

ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (machine learning), ಡಾಟಾ ಅನಾಲಿಟಿಕ್ಸ್ (ata analytics) ಇತ್ಯಾದಿ ನವೀನ ಕೌಶಲ್ಯಗಳನ್ನು ಹೊಂದಿದವರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ.

ಇದರಿಂದಾಗಿ ಹೊಸ ನೇಮಕಾತಿ ಈ ವರ್ಷ ಗಣನೀಯವಾಗಿ ಹೆಚ್ಚುತ್ತಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಆಟೊಮೇಶನ್ ಟೆಕ್ನಾಲಜಿಗೆ ಎಲ್ಲಿಲ್ಲದ ಮಹತ್ವ ಸೃಷ್ಟಿಯಾಗುತ್ತಿದ್ದು, ಆ ಕೌಶಲ್ಯಗಳ ಅಗತ್ಯತೆ ಹೆಚ್ಚಾಗಿದೆ. ಹೀಗಾಗಿ ಡಾಟಾ ಆಧಾರಿತ ಕೆಲಸಗಳಿಗೆ ಹೆಚ್ಚು ಬೇಡಿಕೆ ಇದೆ.

ಇದೇ ಕಾರಣಕ್ಕೆ ಡಾಟಾ ಸೈಂಟಿಸ್ಟ್ ಹುದ್ದೆಗಳಿಗೆ ಅವಕಾಶಗಳು ಹೆಚ್ಚಾಗಿವೆ. ಮೆಷಿನ್ ಲರ್ನಿಂಗ್ ಸ್ಕಿಲ್​ಗಳ ಅಗತ್ಯ ಇದೆ ಎನ್ನುವ ಜಾಬ್ ಪೋಸ್ಟಿಂಗ್​ಗಳೂ ಹೆಚ್ಚಾಗಿವೆ ಎಂದು ಟೀಮ್​ಲೀಸ್ ಡಿಜಿಟಲ್ ಸಂಸ್ಥೆಯ ವಿಶ್ಲೇಷಣೆಯ ದತ್ತಾಂಶಗಳು ತಿಳಿಸುತ್ತವೆ.

ಪೈತಾನ್ ಪ್ರೋಗ್ರಾಮಿಂಗ್, ಎಥಿಕಲ್ ಹ್ಯಾಕಿಂಗ್, ಪೆನಿಟ್ರೇಶನ್ ಟೆಸ್ಟಿಂಗ್, ಎಜೈಲ್ ಸ್ಕ್ರಮ್ ಮಾಸ್ಟರ್, ಎಡಬ್ಲ್ಯುಎಸ್ ಸೆಕ್ಯೂರಿಟಿ, ಜಾವಾಸ್ಕ್ರಿಪ್ಟ್ ಮೊದಲಾದ ವಿದ್ಯೆಗಳನ್ನು ತಿಳಿದವರಿಗೂ ಬೇಡಿಕೆ ಹೆಚ್ಚುತ್ತಿದೆ ಎಂದು ಟೀಮ್​ಲೀಸ್ ಡಿಜಿಟಲ್ ಸಂಸ್ಥೆ ಹೇಳುತ್ತಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version