back to top
27.1 C
Bengaluru
Saturday, March 15, 2025
HomeAutoBikeಆಕರ್ಷಕ ಬೆಲೆಯಲ್ಲಿ ಹೊಸ Adventure Bikes

ಆಕರ್ಷಕ ಬೆಲೆಯಲ್ಲಿ ಹೊಸ Adventure Bikes

- Advertisement -
- Advertisement -

ಅಡ್ವೆಂಚರ್ ಬೈಕ್‌ಗಳನ್ನು (adventure bikes) ಹಿಟ್ ಮಾಡಿದ್ದು ಎನ್‌ಫೀಲ್ಡ್ (Royal Enfield) ಆಗಿದ್ದರೂ, Hero ಈ ವಿಭಾಗವನ್ನು ಹೆಚ್ಚು ಜನಪ್ರಿಯಗೊಳಿಸಿತು ಎಂದು ಹೇಳಬೇಕು.

ಕಡಿಮೆ ಬೆಲೆಯಲ್ಲಿ ಹೀರೋ ಕಂಪನಿಯು ಅಡ್ವೆಂಚರ್ ವಿಭಾಗದಲ್ಲಿ ಎಕ್ಸ್‌ಪಲ್ಸ್ ಎಂಬ ಬೈಕ್ ಅನ್ನು ಬಿಡುಗಡೆಗೊಳಿಸಿ ಹೊಸ ಸಂಚಲನವನ್ನು ಸೃಷ್ಟಿಸಿತು. ಹೀರೋ ತನ್ನ ಹೊಸ  Xpulseನ 210ಸಿಸಿ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಜೊತೆ ಹೊಸ ಅಡ್ವೆಂಚರ್ ಬೈಕುಗಳು (Adventure Bikes) ಕೂಡ ಬರುತ್ತಿದೆ.

Kawasaki KLX 230

Kawasaki KLX 230 bike

ಕವಾಸಕಿ ತನ್ನ ಕವಾಸಕಿ KLX 230 ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅಧಿಕೃತವಾಗಿ ಅನಾವರಣಗೊಳಿಸಿತು. ಈ ಕವಾಸಕಿ KLX 230 ಎಂಬ ಡ್ಯುಯಲ್ ಸ್ಪೋರ್ಟ್ ಬೈಕ್ ಅನ್ನು ಸ್ಥಳೀಯವಾಗಿ ಅಸೆಂಬ್ಲಿ ಮಾಡುವ ಸಾಧ್ಯತೆಯಿದೆ.

ಇದರಿಂದ ಈ ಹೊಸ ಕವಾಸಕಿ ಡ್ಯುಯಲ್ ಸ್ಪೋರ್ಟ್ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರುತ್ತದೆ.

ಕವಾಸಕಿ ತನ್ನ ಕವಾಸಕಿ KLX 230 (Kawasaki KLX 230) ಬೈಕ್ ಅನ್ನ್ನು ಇಂಡಿಯಾ ಬೈಕ್ ವೀಕ್ 2024 ನಲ್ಲಿ ಬಿಡುಗಡೆಗೊಳಿಸಬಹುದು ಎಂದು ಹೇಳಲಾಗುತ್ತಿದೆ.

ಡಿಸೆಂಬರ್ ತಿಂಗಳಿನ ಬಿಡುಗಡೆಗೆ ಮುಂಚಿತವಾಗಿ, ಈ ಕವಾಸಕಿಯು ಹೊಚ್ಚ ಹೊಸ KLX 230 ಡ್ಯುಯಲ್ ಸ್ಪೋರ್ಟ್ ಮಾದರಿಯ ಬುಕಿಂಗ್ ಅನ್ನು ಪ್ರಾರಂಭಿಸಿದೆ.

Hero XPulse 210

Hero XPulse 210 Bike

ಈ ಹೊಸ ಹೀರೊ ಎಕ್ಸ್‌ಪಲ್ಸ್ 210 (Hero XPulse) ಬೈಕ್ ಇತ್ತೀಚೆಗೆ ಲಡಾಖ್‌ನ ಖರ್ದುಂಗ್ ಲಾ ಬಳಿ ಕಾಣಿಸಿಕೊಂಡಿದೆ. ಕರಿಷ್ಮಾ XMR 210 ಸ್ಪೋರ್ಟ್ಸ್ ಬೈಕ್‌ನಿಂದ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಎರವಲು ಪಡೆಯುತ್ತದೆ ಎಂದು ಹೇಳಲಾಗುತ್ತದೆ.

ಡ್ಯುಯಲ್ ಉದ್ದೇಶದ ಅಡ್ವೆಂಚರ್ ಟೂರರ್ ಬೈಕ್ ಆಗಿದೆ. ಈ ಬೈಕಿನಲ್ಲಿ ಕರಿಷ್ಮಾವು 210cc ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ ಅನ್ನು ಹೊಂದಿರಲಿದೆ.

ಈ ಎಂಜಿನ್ 25 bhp ಪವರ್ ಮತ್ತು 20.4 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಸದ್ಯ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಕ್ಸ್‌ಪಲ್ಸ್ ಬೈಕಿನಲ್ಲಿ 199.6 cc 4V ಏರ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 6.1 bhp ಪವರ್ ಮತ್ತು 3.1 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

2025ರ KTM 390 ಅಡ್ವೆಂಚರ್

KTM 390 Adventure

ಈ ಹೊಸ KTM Adventure ಬೈಕ್ ಹೊಚ್ಚ ಹೊಸ ವಿನ್ಯಾಸವನ್ನು ಹೊಂದಿರುತ್ತದೆ. ವಿನ್ಯಾಸ ನವೀಕರಣಗಳ ಜೊತೆ ಹೊಸ ವೈಶಿಷ್ಟ್ಯಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಚಯಿಸುತ್ತದೆ.

ಈ ಬೈಕ್ 399 cc ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ DOHC ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 45 bhp ಮತ್ತು 39 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

 Royal Enfield ಹಿಮಾಲಯನ್ 450 ರ್‍ಯಾಲಿ

Royal Enfield Himalayan 450 Rally

ಈ ರಾಯಲ್ ಎನ್‌ಫೀಲ್ಡ್ Himalayan 450 ಬೈಕ್ ಹೆಚ್ಚು ಒರಟಾದ, ಆಫ್-ರೋಡ್-ಕೇಂದ್ರಿತ ಮಾದರಿಯಾಗಿದೆ. ಗೋ-ಎನೀವೇರ್ ಸಾಮರ್ಥ್ಯವಿರುವ ಮಾದರಿಯಾಗಿದೆ.

ಈ ಬೈಕ್ ರ್‍ಯಾಲಿ-ಸ್ಪೆಕ್ ಟೈಲ್ ಕೌಲ್, ಕ್ರಾಸ್-ಸ್ಪೋಕ್ ಟ್ಯೂಬ್‌ಲೆಸ್ ವೀಲ್‌ಗಳು, ನಕಲ್ ಗಾರ್ಡ್‌ಗಳು, ಹೈ-ಮೌಂಟೆಡ್ ಎಕ್ಸಾಸ್ಟ್, ಮತ್ತು ಇತ್ಯಾದಿ ಸೇರಿದಂತೆ ಹಲವಾರು ಪ್ರಮುಖ ಅಂಶಗಳನ್ನು ಹೊಂದಿರಲಿವೆ. ಈ ಬೈಕ್ 452 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್‌ ಹೊಂದಿರಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page