ಚೀನಾ ಕಂಪನಿಗಳು (Chinese companies) ಮೊಬೈಲ್ ಮಾರುಕಟ್ಟೆಯಲ್ಲಿ ತಮ್ಮದೇ ಆದ ಛಾಪು ಹೊಂದಿವೆ. ಇದರೊಂದಿಗೆ ಬೇರೆ ಬ್ರ್ಯಾಂಡ್ ಮೊಬೈಲ್‌ಗಳು ಸಹ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.
ಈ ಸಾಲಿನಲ್ಲಿ ನಿಲ್ಲು ಬ್ರ್ಯಾಂಡ್ ಗೂಗಲ್ (brand Google). ಅದೆಷ್ಟೋ ಮೊಬೈಲ್‌ಗಳನ್ನು ಲಾಂಚ್ ಮಾಡಿರುವ ಗೂಗಲ್ ಈಗ ಮತ್ತೊಂದು ಹೊಸ ಮೊಬೈಲ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈ ಮೊಬೈಲ್‌ನ ಪ್ರಿ ಬುಕ್ಕಿಂಗ್ ದಿನಾಂಕ ಬಹಿರಂಗವಾಗಿದೆ.
ಗೂಗಲ್ ಪಿಕ್ಸೆಲ್ (Google Pixel) ಪಿಕ್ಸೆಲ್ 9 ಮತ್ತು 9 ಪ್ರೊ ಸಿರೀಸ್ ಅನ್ನು ಗುರುವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಆಗಸ್ಟ್ 14ರಂದು ಬಿಡುಗಡೆಯಾದ ಈ ಸಿರೀಸ್, ದೇಶೀಯ ಮಾರುಕಟ್ಟೆಯನ್ನು ವಾರದ ಬಳಿಕ ಪ್ರವೇಶಿಸಲಿದೆ.
ಗೂಗಲ್ ಪಿಕ್ಸೆಲ್ 9 ಸಿರೀಸ್ ಸ್ಮಾರ್ಟ್‌ಫೋನ್ 128ಜಿಬಿ ಮಾಡೆಲ್ 79,999 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಅದೇ ಪಿಕ್ಸೆಲ್ 9 ಪ್ರೊ XL ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 1,24,999 ರೂಪಾಯಿ.
ಪಿಕ್ಸೆಲ್ 9 ಪ್ರೊ XLಗೆ ಗೂಗಲ್ ಒಂದು ವರ್ಷದ ಗೂಗಲ್ ಒನ್ AI ಪ್ರೀಮಿಯಂ ಪ್ಲ್ಯಾನ್ ಉಚಿತವಾಗಿ ನೀಡಲಿದೆ. ಇದಷ್ಟೇ ಅಲ್ಲದೆ 2ಜಿಬಿ ಕ್ಲೌಡ್ ಸ್ಟೋರೇಜ್, exclusive AI ಫೀಚರ್ ಹೊಂದಿರುವ ಫೋಟೋಸ್ ಆಪ್ ಮತ್ತು ಜೆಮಿನಿ 1.5 ಪ್ರೊ ಆಕ್ಸೆಸ್ ಸಿಗಲಿದೆ.
ಇದಷ್ಟೇ ಅಲ್ಲದೆ ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಕೆದಾರರು ಫ್ಲಿಪ್ಕಾರ್ಟ್ನಲ್ಲಿ ಪ್ಲ್ಯಾಟ್ 10,000 ರೂಪಾಯಿ ಡಿಸ್ಕೌಂಟ್ ಪಡೆಯಬಹುದು. ಈ ಮೂಲಕ ಮೂಲ ಬೆಲೆಗಿಂತ 1,14,999 ರೂಪಾಯಿಗೆ ಸಿಗಲಿದೆ.
ಈ ಡಿವೈಸ್ ಮೂಲಕ ಗೂಗಲ್ ಕಟಿಂಗ್ ಎಡ್ಜ್ ಟೆಕ್ನಾಲಜಿಯನ್ನು ಪರಿಚಯಿಸಿದ್ದು, ಟೆಕ್ ಉತ್ಸಾಹಿಗಳಿಂದ ಹಿಡಿದು ದೈನಂದಿನ ಸ್ಮಾರ್ಟ್ಫೋನ್ ಬಳಕೆದಾರರವರೆಗೆ ವ್ಯಾಪಕ ಶ್ರೇಣಿಯ ಬಳಕೆದಾರರನ್ನು ತಲುಪುವ ಗುರಿಯನ್ನು ಗೂಗಲ್ ಹೊಂದಿದೆ.