Search
WhatsApp alerts

Home › Karnataka

SC ಒಳ ಮೀಸಲಾತಿ ಜಾರಿಗೆ ಸರ್ಕಾರ ಆದೇಶ

administrator · Published

Government orders implementation of SC internal reservation

Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ (SC Internal Reservation) ಜಾರಿಗೆ ಅಧಿಕೃತ ಆದೇಶ ಹೊರಡಿಸಿದೆ. ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ.

ಮೀಸಲಾತಿ ಹಂಚಿಕೆಯ ವಿವರ

  • ಒಟ್ಟು ಶೇ. 17 ಮೀಸಲಾತಿ ಹಂಚಿಕೆ
  • ಎಡಗೈ ಸಮುದಾಯ (18 ಜಾತಿಗಳು) – ಶೇ. 6
  • ಬಲಗೈ ಸಮುದಾಯ (20 ಜಾತಿಗಳು) – ಶೇ. 6
  • ಇತರೆ ಸಮುದಾಯಗಳು (63 ಜಾತಿಗಳು) – ಶೇ. 5

ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರ ನೇತೃತ್ವದ ಆಯೋಗವು ಪರಿಶಿಷ್ಟ ಜಾತಿಗಳನ್ನು ಎ, ಬಿ, ಸಿ, ಡಿ, ಇ ಎಂದು ಐದು ವರ್ಗಗಳಾಗಿ ವಿಭಜಿಸಿ ಒಳ ಮೀಸಲಾತಿ ಶಿಫಾರಸು ಮಾಡಿತ್ತು.

  • ಎಡಗೈ – ಶೇ. 6
  • ಬಲಗೈ – ಶೇ. 5
  • ಲಂಬಾಣಿ, ಭೋವಿ – ಶೇ. 4
  • ಅಲೆಮಾರಿ – ಶೇ. 1
  • ಆದಿ ಕರ್ನಾಟಕ, ಆದಿ ದ್ರಾವಿಡ – ಶೇ. 1

ಆದರೆ ಸಚಿವ ಸಂಪುಟ ಸಭೆಯಲ್ಲಿ ಎಡಗೈಗೆ ಶೇ. 6, ಬಲಗೈಗೆ ಶೇ. 6 ಮತ್ತು ಇತರರಿಗೆ ಶೇ. 5 ಮೀಸಲಾತಿ ನೀಡಲು ತೀರ್ಮಾನ ಮಾಡಲಾಯಿತು.

ಒಳ ಮೀಸಲಾತಿಗೆ ಒಳಪಟ್ಟ ಜಾತಿಗಳು

  • ಎಡಗೈ ಜಾತಿಗಳು: ಮಾದಿಗ, ಮೋಚಿ, ಹರಳಯ್ಯ, ಚಮಾರ್, ತೆಲುಗು ಮೋಚಿ, ಪನ್ನಿಯಾಂಡಿ, ರಾಣಿಗಾರ್ ಮತ್ತಿತರರು.
  • ಬಲಗೈ ಜಾತಿಗಳು: ಮಾಳ, ಹೊಲಯ, ಮಹಾರ್, ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತಿತರರು.
  • ಇತರೆ ಸಮುದಾಯಗಳು: ಲಂಬಾಣಿ, ಭೋವಿ, ಕೊರಚ, ಕೊರಮ, ಬಂಜಾರ, ವಡ್ಡರ, ಮುಕ್ರಿ, ಪಂಬದ ಮತ್ತಿತರರು.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page