ಕರ್ನಾಟಕ ವಿಧಾನ ಪರಿಷತ್ತಿಗೆ ನಾಲ್ಕು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಲು ಸರ್ಕಾರ ಕಳುಹಿಸಿದ ಪಟ್ಟಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
ಈ ಪಟ್ಟಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಡಾ. ಆರತಿ ಕೃಷ್ಣ, ಎಫ್.ಹೆಚ್. ಜಕ್ಕಪ್ಪನವರ್ ಹಾಗೂ ಪತ್ರಕರ್ತ ಶಿವಕುಮಾರ್ ಕೆ ಅವರ ಹೆಸರುಗಳಿವೆ.
ಮೂರು ಮಂದಿ ಆರು ವರ್ಷಗಳ ಅವಧಿಗೆ ಸದಸ್ಯರಾಗಲಿದ್ದಾರೆ. ರಮೇಶ್ ಬಾಬು ಅವರ ಅಧಿಕಾರ ಅವಧಿ 2026ರ ಜುಲೈ 21ರವರೆಗೆ ಇರಲಿದೆ.
ಜಕ್ಕಪ್ಪ, ಆರತಿ ಕೃಷ್ಣ, ರಮೇಶ್ ಬಾಬು ಹಾಗೂ ಶಿವಕುಮಾರ್ ಇವರನ್ನು ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿತ್ತು. ರಾಜ್ಯ ಸರ್ಕಾರ ಈ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿತ್ತು.
- ಅಭ್ಯರ್ಥಿಗಳ ಜಿಲ್ಲಾವಾರು ವಿವರ
- ಆರತಿ ಕೃಷ್ಣ – ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರ
- ರಮೇಶ್ ಬಾಬು – ಕೆಪಿಸಿಸಿ ಮಾಧ್ಯಮ ವಕ್ತಾರ
- ಶಿವಕುಮಾರ್ – ಮೈಸೂರಿನ ಪತ್ರಕರ್ತ
- ಜಕ್ಕಪ್ಪನವರ್ – ಕಾಂಗ್ರೆಸ್ ನಾಯಕ
ಮೊದಲ ಪಟ್ಟಿಯಲ್ಲಿ ರಮೇಶ್ ಬಾಬು, ಡಿ.ಜಿ. ಸಾಗರ್, ದಿನೇಶ್ ಅಮೀನ್ ಮಟ್ಟು ಮತ್ತು ಆರತಿ ಕೃಷ್ಣ ಅವರ ಹೆಸರುಗಳಿದ್ದವು. ಆದರೆ ಸಾಗರ್ ಮತ್ತು ಅಮೀನ್ ಮಟ್ಟು ವಿರುದ್ಧ ಆಕ್ಷೇಪ ಬಂದ ಕಾರಣ ಅವರ ಹೆಸರನ್ನು ಕೈಬಿಡಲಾಯಿತು.
ಆಕ್ಷೇಪದ ಹಿನ್ನೆಲೆಯಲ್ಲಿ ಹೈಕಮಾಂಡ್, ಸಿಎಂ ಹಾಗೂ ಡಿಸಿಎಂಗೆ ಹೊಸ ಪಟ್ಟಿಯನ್ನು ತಯಾರಿಸುವಂತೆ ಸೂಚಿಸಿತು. ನಂತರ ಅಂತಿಮ ಪಟ್ಟಿಯಲ್ಲಿ ಜಕ್ಕಪ್ಪನವರ್ ಮತ್ತು ಪತ್ರಕರ್ತ ಶಿವಕುಮಾರ್ ಸೇರಿಸಲಾಯಿತು.