ಓಪನ್‌ಎಐ ತನ್ನ ಹೊಸ ಭಾಷಾ ಮಾದರಿ GPT-5 ಅನ್ನು ಬಿಡುಗಡೆ ಮಾಡಿ AI ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಸಿಇಒ ಸ್ಯಾಮ್ ಆಲ್ಟ್ಮನ್ ಪ್ರಕಾರ, ಇದು ಹಿಂದಿನ ಮಾದರಿಗಳಿಗಿಂತ ಹೆಚ್ಚು ಬುದ್ಧಿವಂತ, ವೇಗದ, ಮತ್ತು ಕಡಿಮೆ ದೋಷಗಳನ್ನು ನೀಡುತ್ತದೆ. ಕೋಡಿಂಗ್, ಬರವಣಿಗೆ, ಆರೋಗ್ಯ ಕ್ಷೇತ್ರಗಳಲ್ಲಿ ಇದು ಅತ್ಯುತ್ತಮ ಎಂದು ಹೇಳಲಾಗಿದೆ.
GPT-5 ಈಗ ಬಳಕೆದಾರರು ಮತ್ತು ಡೆವಲಪರ್ ಗಳು ಎರಡರಿಗೂ ಲಭ್ಯ. ಒಂದೇ ಮಾದರಿಯಲ್ಲಿ ಕೆಲಸ ಮಾಡುವ ಈ ವ್ಯವಸ್ಥೆಯಲ್ಲಿ ರೂಟರ್ ತಂತ್ರಜ್ಞಾನವಿದ್ದು, ಕಷ್ಟವಾದ ಪ್ರಶ್ನೆಗಳಿಗೆ ಸ್ವಯಂಚಾಲಿತವಾಗಿ ಹೆಚ್ಚು ಶಕ್ತಿಶಾಲಿ ಆವೃತ್ತಿ ಆಯ್ಕೆ ಮಾಡುತ್ತದೆ. ಹೊಸ ಇಂಟರ್ಫೇಸ್ ಬಳಕೆದಾರರಿಗೆ ಹೆಚ್ಚು ಸುಲಭ ಮತ್ತು ಸುಂದರ ಅನುಭವ ನೀಡುತ್ತದೆ.
ಉಚಿತ ಬಳಕೆದಾರರಿಗೆ ಮಿತಿಗಳು: ಉಚಿತ ಬಳಕೆದಾರರು ನಿರ್ದಿಷ್ಟ ಮಿತಿವರೆಗೆ ಮಾತ್ರ GPT-5 ನ ಸಂಪೂರ್ಣ ಸಾಮರ್ಥ್ಯ ಬಳಸಬಹುದು. ಮಿತಿಯನ್ನು ದಾಟಿದ ನಂತರ ಕಡಿಮೆ ಶಕ್ತಿಯ ಮಿನಿ ಆವೃತ್ತಿ ಬಳಸಲಾಗುತ್ತದೆ.
ಡೆವಲಪರ್ಗಳಿಗೆ ಮೂವರು ಆಯ್ಕೆಗಳು – GPT-5, GPT-5 ಮಿನಿ, ಮತ್ತು GPT-5 ನ್ಯಾನೋ. ಇನ್ನು, ಬಳಕೆದಾರರು ತಮ್ಮ ಇಂಟರ್ಫೇಸ್‌ಗೆ ‘ಸಿನಿಕ್’, ‘ರೋಬೋಟ್’, ‘ಲಿಸನರ್’, ‘ನೆರ್ಡ್’ ಎಂಬ ಥೀಮ್‌ಗಳನ್ನು ಆಯ್ಕೆಮಾಡಬಹುದು ಹಾಗೂ ಬಣ್ಣಗಳನ್ನು ಬದಲಾಯಿಸಬಹುದು.
ಕೋಡಿಂಗ್‌ನಲ್ಲಿ ಅಸಾಧಾರಣ ಸಾಮರ್ಥ್ಯ: ಪರೀಕ್ಷೆಗಳಲ್ಲಿ GPT-5, SWE-Bench ಮತ್ತು Aider Polyglot ಬೆಂಚ್ಮಾರ್ಕ್‌ಗಳಲ್ಲಿ ಇತರ ಮಾದರಿಗಳನ್ನು ಮೀರಿಸಿದೆ. ಆಲ್ಟ್ಮನ್ ಪ್ರಕಾರ, ಇದು ಬೇಡಿಕೆಯ ಮೇರೆಗೆ ಸಾಫ್ಟ್ವೇರ್ ನಿರ್ಮಿಸಲು ಸಹ ಸಮರ್ಥವಾಗಿದೆ. ಸುರಕ್ಷತೆಯ ವಿಚಾರದಲ್ಲಿ ಕೂಡ ಉತ್ತಮ ಪ್ರಗತಿ ಸಾಧಿಸಲಾಗಿದೆ.
ಹೆಚ್ಚು ಪರೀಕ್ಷೆ, ಕಡಿಮೆ ತಪ್ಪು: GPT-5 ಅನ್ನು 5,000 ಗಂಟೆಗಳಿಗೂ ಹೆಚ್ಚು ಪರೀಕ್ಷಿಸಲಾಗಿದೆ. ಇದು ಹಿಂದಿನ ಮಾದರಿಗಳಿಗಿಂತ ಕಡಿಮೆ ತಪ್ಪು ಮಾಹಿತಿ ನೀಡುತ್ತದೆ.
ಆದರೆ ಆತ್ಮವಿಶ್ವಾಸದಿಂದ ತಪ್ಪು ಹೇಳುವ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಹೋಗಲಿಲ್ಲ. ಹಾನಿಕಾರಕ ಪ್ರಶ್ನೆಗಳಿಗೆ ನೇರ ಉತ್ತರ ಬದಲಾಗಿ, ಇದು ಉನ್ನತ ಮಟ್ಟದ ಮಾಹಿತಿ ನೀಡುತ್ತದೆ.
ಭವಿಷ್ಯದ ಸವಾಲುಗಳು: GPT-5, AGI ಕಡೆಗೆ ಪ್ರಮುಖ ಹೆಜ್ಜೆಯಾದರೂ, ನಿಯೋಜನೆಯ ನಂತರ ನಿರಂತರ ಕಲಿಕೆಯ ಸಾಮರ್ಥ್ಯ ಇನ್ನೂ ಸವಾಲಾಗಿದೆ. ಭವಿಷ್ಯದಲ್ಲಿ, ಉತ್ತರ ಗೊತ್ತಿಲ್ಲದಿದ್ದಾಗ ಅಥವಾ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗದಿದ್ದಾಗ ಸ್ಪಷ್ಟವಾಗಿ ಒಪ್ಪಿಕೊಳ್ಳುವ ಸಾಮರ್ಥ್ಯ ಸೇರಿಸುವ ಗುರಿಯಿದೆ. ಇದು ಬಳಕೆದಾರರ ನಂಬಿಕೆಯನ್ನು ಹೆಚ್ಚಿಸುತ್ತದೆ.